ಅಂತರಾಷ್ಟ್ರೀಯ

ನೇಪಾಳದಲ್ಲಿ ವಿಮಾನ ಪತನ: 23 ಮಂದಿ ಸಾವು

Pinterest LinkedIn Tumblr

nepal

ಕಠ್ಮಡು(ಪಿಟಿಐ): ನೇಪಾಳದಲ್ಲಿ ಬುಧವಾರ ನಾಪತ್ತೆಯಾಗಿದ್ದ ಚಿಕ್ಕ ವಿಮಾನ ಪರ್ವತ ಪ್ರದೇಶದಲ್ಲಿ ಪತನವಾಗಿದ್ದು, ದುರಂತದಲ್ಲಿ ಇಬ್ಬರು ವಿದೇಶಿಯರು ಹಾಗೂ ಇಬ್ಬರು ಮಕ್ಕಳು ಸೇರಿದಂತೆ 23 ಮಂದಿ ಸಾವಿಗೀಡಾಗಿದ್ದಾರೆ.

ತಾರಾ ಏರ್‌ ಸಂಸ್ಥೆಗೆ ಸೇರಿದ ವಿಮಾನ ಪ್ರವಾಸಿ ತಾಣ ಪೊಖರಾದಿಂದ ಜ್ಯಾಮ್‌ಸಮ್‌ಗೆ ತೆರಳುತ್ತಿತ್ತು. ಆದರೆ, ಹಾರಾಟ ಆರಂಭಿಸಿದ 20 ನಿಮಿಷ ಬಳಿಕ ಸಂಪರ್ಕ ಕಳೆದುಕೊಂಡಿದೆ. ಪೊಖರಾ ಪ್ರದೇಶ ಕಠಂಡುನಿಂದ 200 ಕಿ.ಮೀ. ದೂರದಲ್ಲಿದೆ.

ವಿಮಾನ ಸೊಲಿಗೊಪಾಟಿ ಅರಣ್ಯ ಪ್ರದೇಶದಲ್ಲಿ ಪತನವಾಗಿದೆ. ವಿಮಾನದ ಭಗ್ನಾವಶೇಷಗಳು ಮತ್ತು ಮೃತ ದೇಹಗಳು ಪಶ್ಚಿಮ ಜಿಲ್ಲೆ ಪ್ರದೇಶದಲ್ಲಿ ಬಿದ್ದಿವೆ ಎಂದು ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ನಾಗರಕ ವಿಮಾನಯಾನ ಸಚಿವ ಆನಂದ ಪಿ. ಅವರು ತಿಳಿಸಿದ್ದಾರೆ.

ಘಟನೆಯಲ್ಲಿ 18 ನೇಪಾಳದ ಪ್ರಜೆಗಳು ಹಾಗೂ ಇಬ್ಬರು ವಿದೇಶಿರಯರು ಮೃತಪ್ಟಿದ್ದಾರೆ. ಮೃತ ವಿದೇಶಿಯರಲ್ಲಿ ಒಬ್ಬರು ಚೀನಾ, ಇನ್ನೊಬ್ಬರು ಕುವೈತ್‌ನವರು ಎಂದು ಗುರುತು ಪತ್ತೆಯಾಗಿದೆ.

Write A Comment