ಕೊಲಂಬಿಯ, ಫೆ.21- ದಿನ ಕಳೆದಂತೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಹೊಸ ಹೊಸ ರೂಪ ಪಡೆದುಕೊಳ್ಳುತ್ತಿದ್ದು, ವಿವಾದಿತ ವ್ಯಕ್ತಿ ಎಂದೇ ಬಿಂಬಿತವಾಗಿದ್ದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ದಕ್ಷಿಣ ಕೆರೊಲಿನಾದಲ್ಲಿ ನಡೆದ ಚುನಾವಣಾ ಪೂರ್ವ ಜನಾಭಿಪ್ರಾಯದಲ್ಲಿ ಭಾರೀ ಮುನ್ನಡೆ ಸಾದಿಸಿದ್ದರೆ, ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಪತ್ನಿ ಹಿಲರಿ ನೇವಡದಲ್ಲಿ ಮುನ್ನಡೆ ಪಡೆದಿದ್ದಾರೆ.
ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಭಾರೀ ಮುನ್ನಡೆ ಸಾಧಿಸುತ್ತಿದ್ದಂತೆಯೇ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮತ್ತೊಬ್ಬ ರಿಪಬ್ಲಿಕನ್ ಅಭ್ಯರ್ಥಿ ಹಾಗೂ ಫ್ಲೋರಿಡಾದ ಮಾಜಿ ಗವರ್ನರ್ ಜೆಬ್‌ಬುಷ್ ಅವರು ತಮ್ಮ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಕಣದಿಂದಲೇ ಹಿಂದೆ ಸರಿದಿದ್ದಾರೆ.
ಡೊನಾಲ್ಡ್ ಟ್ರಂಪ್ ಬೆಂಬಲಕ್ಕೆ ಅವರ ಪತ್ನಿ ಮೆಲಾನಿಯಾ ನಿಂತಿದ್ದರೆ, ಹಿಲರಿಗೆ ಅವರ ಪತಿ ಬಿಲ್ ಕ್ಲಿಂಟನ್ ಬೆಂಬಲಕ್ಕಿದ್ದಾರೆ. ಇನ್ನೊಬ್ಬ ಅಭ್ಯರ್ಥಿ ಸ್ಯಾಂಡರ್ಸ್ ಅವರು ಹಿಲರಿಯನ್ನು ಅಭಿನಂದಿಸಿದ್ದಾರೆ.