ಲಾಹೋರ್,ಫೆ.10-ಗ್ಯಾಸ್ ಟ್ಯಾಂಕರ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಶಾಲಾ ಮಕ್ಕಳು ಸೇರಿದಂತೆ ಒಟ್ಟು 13ಜನ ಜೀವಂತವಾಗಿ ಸುಟ್ಟುಹೋಗಿದ್ದಾರೆ.
ಇಲ್ಲಿನ ಪಂಜಾಬ್ ಪ್ರಾತ್ಯದ ಮನ್ವಾಲ ಸಮೀಪದ ಶೇಖೂ ಪುರ ಬಳಿ ವೇಗವಾಗಿ ಬಂದ ಕಾರೊಂದು ಗ್ಯಾಸ್ ಟ್ಯಾಂಕರ್‌ಗೆ ಅಪ್ಪಳಿಸಿತು. ಈ ಅಪಘಾತದಿಂದ ಸ್ಫೋಟ ಸಂಭವಿಸಿ ಪಕ್ಕದಲ್ಲೇ ಹೋಗುತ್ತಿದ್ದ ಶಾಲಾ ಮಕ್ಕಳ ಆಟೋ ರಿಕ್ಷಕ್ಕೆ ಬೆಂಕಿ ಹೊತ್ತಿಕೊಂಡಿತು. ನೋಡು ನೋಡುತ್ತಿದ್ದಂತೆ ಕಾರು ಮತ್ತು ರಿಕ್ಷಾಗಳನ್ನು ಬೆಂಕಿಯ ಕೆನ್ನಾಲಗೆ ಆವರಿಸಿ ರಿಕ್ಷಾದಲ್ಲಿದ್ದ ಆರು ಮಕ್ಕಳು ಹಾಗೂ ಕಾರಿನಲ್ಲಿದ್ದ 7ಜನ ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ.