ಅಂತರಾಷ್ಟ್ರೀಯ

ಪ್ರವಾಸಿ ತಾಣ ಇಸ್ತಾನ್‌ಬುಲ್‌ನಲ್ಲಿ ಭಾರಿ ಸ್ಫೋಟ, 10 ಸಾವು

Pinterest LinkedIn Tumblr

blast

ಇಸ್ತಾನ್‌ಬುಲ್: ಟರ್ಕಿ ದೇಶದ ಐತಿಹಾಸಿಕ ಪ್ರವಾಸಿ ತಾಣ ಇಸ್ತಾನ್‌ಬುಲ್‌ನ ಹೃದಯ ಭಾಗದಲ್ಲಿ ಮಂಗಳವಾರ ಬಾಂಬ್ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಮತ್ತು 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ನಗರದ ಪ್ರಮುಖ ಪ್ರವಾಸಿ ತಾಣ ಸಲ್ತಾನ್‌ಮೆಟ್‌ನಲ್ಲಿ ಈ ಸ್ಫೋಟ ಸಂಭವಿಸಿದ್ದು, ಸ್ಥಳಕ್ಕೆ ಆ್ಯಂಬುಲೆನ್ಸ್ ಹಾಗೂ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಸ್ಫೋಟದ ಸದ್ದು ತುಂಬಾ ಜೋರಾಗಿತ್ತು ಎಂದು ನೆರೆಹೊರೆಯವರು ಹಾಗೂ ಪ್ರತ್ಯಕ್ಷದರ್ಶಿಗಳು ಎಎಫ್‌ಪಿಗೆ ತಿಳಿಸಿದ್ದಾರೆ. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಟರ್ಕಿಯಲ್ಲಿ ಕಳೆದ ಅಕ್ಟೋಬರ್‌ನಲ್ಲಿ ನಡೆದ ಅವಳಿ ಆತ್ಮಹತ್ಯೆ ಬಾಂಬ್ ದಾಳಿಯಲ್ಲಿ 103 ಮಂದಿ ಮೃತಪಟ್ಟಿದ್ದರು. ಹೀಗಾಗಿ ಟರ್ಕಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು.

 

Write A Comment