ಅಂತರಾಷ್ಟ್ರೀಯ

ನೇಪಾಳಕ್ಕೆ ೧.೪ ಮಿಲಿಯನ್ ಲೀಟರ್ ಹೆಚ್ಚುವರಿ ಇಂಧನ ನೀಡಲಿರುವ ಚೈನಾ

Pinterest LinkedIn Tumblr

nepal-chinaಖಟ್ಮಂಡು: ನೇಪಾಳಕ್ಕೆ ೧೦ ಮಿಲಿಯನ್ ಯೆನ್ ಮೌಲ್ಯದ ೧.೪ ಮಿಲಿಯನ್ ಲೀಟರ್ ಇಂಧನವನ್ನು ಅನುದಾನವಾಗಿ ನೀಡಲು ಚೈನಾ ಸರ್ಕಾರ ಒಪ್ಪಿಕೊಂಡಿದೆ ಎಂದು ನೇಪಾಳದ ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವ ಕಮಲ್ ಥಾಪಾ ಮಂಗಳವಾರ ಹೇಳಿದ್ದಾರೆ.

ನೂತನ ಸಂವಿಧಾನದ ವಿರುದ್ಧ ಮಾದೇಸಿ ಪ್ರತಿಭಟನೆಯಿಂದ ಭಾರತ ಮತ್ತು ನೇಪಾಳದ ನಡುವೆ ಹೆಚ್ಚಳಗೊಂಡಿರುವ ಉದ್ವಿಜ್ಞತೆಯಿಂದ ಭಾರತದ ಗಡಿಯಲ್ಲಿ ಇಂಧನ ಮತ್ತು ಅಗತ್ಯ ವಸ್ತುಗಳ ಸಾಗಾಣೆ ಸ್ಥಗಿತಗೊಂಡಿದ್ದು, ನೇಪಾಳದಲ್ಲಿ ಇಂಧನದ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಅಕ್ಟೋಬರ್ ನಲ್ಲಿ ಚೈನಾ ೧.೩ ಮಿಲಿಯನ್ ಲೀಟರ್ ಪೆಟ್ರೋಲ್ ನೀಡಿತ್ತು.

ಚೈನಾ ನೀಡಿದ್ದ ಇಂಧನವನ್ನು ಟಿಬೆಟ್ಟಿನ ಕೆರುಂಗ್ ನಿಂದ ಖಟ್ಮಂಡುವಿಗೆ ನೇಪಾಳ ಇಂಧನ ಸಂಸ್ಥೆ ಸಾಗಾಣೆ ಮಾಡಿತ್ತು.

ಈ ಒಪ್ಪಂದದಿಂದ ಐದು ದಶಕಗಳಿಂದ ನೇಪಾಳಕ್ಕೆ ಇಂಧನ ಒದಗಿಸುತ್ತಿದ್ದ ಭಾರತದ ಏಕಸ್ವಾಮ್ಯತೆ ಅಂತ್ಯವಾಗಿದೆ. ಬೇರೆ ಕ್ಷೇತ್ರಗಳಲ್ಲೂ ಕೂಡ ನೇಪಾಳ ಚೈನಾಗೆ ನಿಕಟವಾಗುತ್ತಿರುವುದು ವಿದೇಶಾಂಗ ನೀತಿಯ ಪಂಡಿತರಲ್ಲಿ ಬೆರಗು ಮೂಡಿಸಿದೆ.

ಚೈನಾದಿಂದ ಇಂಧನ ಆಮದು ಮಾಡಿಕೊಳ್ಳುವ ಅಧಿಕೃತ ಒಪ್ಪಂದ ನೇಪಾಳ ಪ್ರಧಾನಿ ಕೆ ಪಿ ಓಲಿ ಅವರು ಚೈನಾಗೆ ಭೇಟಿ ನೀಡಿದಾಗ ಜರುಗಲಿದೆ ಎಂದು ಥಾಪಾ ಹೇಳಿದ್ದಾರೆ.

Write A Comment