ಅಂತರಾಷ್ಟ್ರೀಯ

ಮೈ ಭಾರ ಇಳಿಯಿತು, ಉಸಿರೂ ನಿಂತಿತು..!

Pinterest LinkedIn Tumblr

maxiko-webfff

ಮೆಕ್ಸಿಕೋ: ಜಗತ್ತಿನ ಅತ್ಯಂತ ಭಾರವಾದ ವ್ಯಕ್ತಿ ಎಂಬ ಕೀರ್ತಿಗೆ ಭಾಜನರಾದ ಆಂಡ್ರೆಸ್ ಮೊರೆನೊ ಹೃದಯಾಘಾತದಿಂದ ಶುಕ್ರವಾರ ಮರಣವನ್ನಪ್ಪಿದ್ದಾರೆ.

ಕಳೆದ ಎರಡು ತಿಂಗಳ ಹಿಂದಷ್ಟೆ ತಮ್ಮ ಭಾರವನ್ನು ಕಡಿಮೆ ಮಾಡಿಕೊಳ್ಳಲು ಶಸ್ತ್ರ ಚಿಕಿತ್ಸೆ ಮಾಡಿಕೊಂಡಿದ್ದರು. 450 ಕೆಜಿ ತೂಕ ಇರುವ ವ್ಯಕ್ತಿಯ ಹೊಟ್ಟೆಯ ಭಾಗಕ್ಕೆ ಬಾರಿಯಾಟ್ರಿಕ್ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಹೊಟ್ಟೆಯಲ್ಲಿನ ಅರ್ಧಕ್ಕಿಂತ ಹೆಚ್ಚು ಬೊಜ್ಜು ಭಾಗವನ್ನು ತೆಗೆಯಲಾಗಿತ್ತು ಎಂದು ಕ್ಸಿನುವ್ಹಾ ವಾರ್ತಾ ಸಂಸ್ಥೆ ಹೇಳಿದೆ.

ಈ ಸಂದರ್ಭದಲ್ಲಿ ಆಹಾರ ಸೇವನೆಗೆ ನಳಿಕೆಯನ್ನು ವೈದ್ಯರು ಅಳವಡಿಕೆ ಮಾಡಿದ್ದರು. ಈ ವಿಧಾನದಿಂದ ಆಂಡ್ರೆಸ್ 100 ಕೆಜಿ ತೂಕ ಇಳಿಸಿಕೊಂಡಿದ್ದರು. ಆದರೆ ಕ್ರಿಸ್ಮಸ್ ದಿನದಂದು ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಕುಟುಂಬದ ಸದಸ್ಯರು ಆಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಸಾಗಿಸುವಾಗಲೇ ಕೊನೆ ಉಸಿರೆಳೆದಿದ್ದಾರೆ.

Write A Comment