ಅಂತರಾಷ್ಟ್ರೀಯ

ಭಾರತವೇ ನಿರ್ಮಿಸಿದ ಆಫ್ಘನ್ ಸಂಸತ್ ಭವನ ಉದ್ಘಾಟಿಸಿದ ಮೋದಿ

Pinterest LinkedIn Tumblr

Afghan-webಕಾಬೂಲ್: ಆಫ್ಘಾನಿಸ್ತಾನ ಜೊತೆಗಿನ ಸ್ನೇಹ ಮತ್ತು ಸಮರಗಳಿಂದ ತತ್ತರಿಸಿದ್ದ ಆಫ್ಘಾನಿಸ್ತಾನದ ಮರುನಿರ್ಮಾಣಕ್ಕೆ ಸಹಕಾರದ ಸಂಕೇತವಾಗಿ ಭಾರತವೇ ನಿರ್ಮಿಸಿಕೊಟ್ಟ ಆಫ್ಘಾನಿಸ್ತಾನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಇಲ್ಲಿ ಉದ್ಘಾಟಿಸಿದರು.

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಆಫ್ಘಾನಿಸ್ತಾನಕ್ಕೆ ಚೊಚ್ಚಲ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಆಫ್ಘಾನ್ ಭೇಟಿಯನ್ನು ಭದ್ರತಾ ಕಾರಣಗಳಿಗಾಗಿ ರಹಸ್ಯವಾಗಿ ಇಡಲಾಗಿತ್ತು.

ಸಮರಗಳಿಂದ ತತ್ತರಿಸಿದ್ದ ಆಫ್ಘಾನಿಸ್ತಾನದ ಮರುನಿರ್ಮಾಣ ಮತ್ತು ಅಧಿಕಾರಿಗಳಿಗೆ ತರಬೇತಿ ನೀಡುವುದಕ್ಕಾಗಿ ಭಾರತ 200 ಕೋಟಿ ಡಾಲರ್​ಗಳನ್ನು ವೆಚ್ಚ ಮಾಡಿದೆ. ಆಫ್ಘಾನಿಸ್ತಾನದ ಸಂಸತ್ ಭವನ ನಿರ್ಮಾಣ ಕಾರ್ಯವನ್ನು 2007ರಿಂದ ಆರಂಭಿಸಲಾಗಿತ್ತು. ಸಂಸತ್ ಭವನದ ಒಂದು ಭಾಗಕ್ಕೆ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಇರಿಸಲಾಗಿದೆ.

ಉದ್ಘಾಟನೆಯ ಬಳಿಕ ಮೋದಿ ಅವರು ನೂತನ ಸಂಸತ್ ಭವನದಲ್ಲಿ ಆಫ್ಘನ್ ಸಂಸದರನ್ನು ಉದ್ದೇಶಿಸಿ ಮಾತನಾಡಿದರು. ಆಫ್ಘಾನಿಸ್ತಾನ ನಾಯಕರ ಜೊತೆಗೆ ಮೋದಿ ಅವರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು ಅಧ್ಯಕ್ಷ ಅಶ್ರಫ್ ಘನಿ ಹಾಗೂ ಪ್ರಧಾನಿ ಹಮೀದ್ ಕರ್ಜೈ ಅವರ ಜೊತೆಗೂ ಮಾತುಕತೆ ನಡೆಸಲಿದ್ದಾರೆ.

Write A Comment