ಅಂತರಾಷ್ಟ್ರೀಯ

ಮಹಿಳೆ ಸ್ನಾನ ಮಾಡುತ್ತಿದ್ದಾಗ ವಿಡಿಯೋ ಮಾಡಿ ಜೈಲು ಸೇರಿದ ಭಾರತೀಯ

Pinterest LinkedIn Tumblr

mahileಸಿಂಗಪೂರ್,ಡಿ.22-ಮಹಿಳೆಯೊಬ್ಬಳು ಸ್ನಾಮಾಡುತ್ತಿದ್ದಾಗ, ಆಕೆಯ ವಿಡಿಯೋತೆಗೆದಿದ್ದ ಭಾರತೀಯ ಪ್ರಜೆಯೊಬ್ಬನಿಗೆ ಇಲ್ಲಿನ ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ದುರೈಕುಮರನ್ ಸುಬ್ರಮಣಿಯನ್ ಎಂಬ ಭಾರತೀಯ ಪ್ರಜೆ, ಶೌಚಾಲಯ ಮತ್ತು ಸ್ನಾನಗೃಹಗಳಲ್ಲಿ ತನ್ನ ಮೊಬೈಲ್ ಇಟ್ಟು ಅದನ್ನು ವಿಡಿಯೋಗೆ ಸಂಪರ್ಕಿಸಿ ಚಿತ್ರ ತೆಗೆಯುತ್ತಿದ್ದ.

ಇತ್ತೀಚಿಗೆ ಮಹಿಳೆಯಿಬ್ಬಳು ಸ್ನಾನ ಮಾಡುವಾಗ ಅದನ್ನು ಚಿತ್ರೀಕರಿಸಿಕೊಂಡಿದ್ದ . ಇದು ಪತ್ತೆಯಾಗಿ ದೂರು ನೀಡಿದ ಬಳಿಕ ಮತ್ತೊಬ್ಬ ಮಹಿಳೆ ತಾನು ಸ್ನಾನ ಮಾಡುವಾಗ ದುರೈಕುಮರನ್ ಇಣುಕಿ ನೋಡಿದ್ದ ಎಂದು ದೂರಿದ್ದಳು. ಆರೋಪ ಸಾಭೀತಾದ ನಂತರ ನ್ಯಾಯಾಲಯ ದುರೈಕುಮರನ್‌ಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

Write A Comment