ಅಂತರಾಷ್ಟ್ರೀಯ

ಅಜೀರ್ಣ ಸಮಸ್ಯೆ, ಶೀತ ನೆಗಡಿಗೆ ರಾಮಬಾಣ ಕರ್ಪೂರ

Pinterest LinkedIn Tumblr

Camphorಕರ್ಪೂರದಲ್ಲಿ ಎರಡು ವಿಧ. ಒಂದು ಸೇವನೆಗೆ ಯೋಗ್ಯವಾದ ಕರ್ಪೂರ ಇನ್ನೊಂದು ತಯಾರು ಮಾಡಲ್ಪಟ್ಟ ಕರ್ಪೂರ

ಅದ್ಯಾವುದೇ ಧಾರ್ಮಿಕ ಆಚರಣೆಗಳೇ ಇರಲಿ ಅಥವಾ ಕೋಣೆಯಲ್ಲಿ ಸುಗಂಧವನ್ನು ತುಂಬಬೇಕಾದರೆ ಅಲ್ಲಿ ಕರ್ಪೂರವೇ ಬೇಕು. ಕರ್ಪೂರದ ಬೆಳಕು ಮತ್ತು ಗಂಧ ಮನುಷ್ಯನಲ್ಲಿ ಪಾಸಿಟಿವ್ ಎನರ್ಜಿಯನ್ನು ತುಂಬುತ್ತದೆ.

ಕರ್ಪೂರದ ಮರದ ಕಾಂಡದಿಂದ ತಯಾರಿಸ್ಪಡುವುದು ಒಂದು ರೀತಿಯ ಕರ್ಪೂರವಾದರೆ ಇನ್ನೊಂದನ್ನು ಟರ್ಪೆಂಟೈನ್ ತೈಲದಿಂದ ತಯಾರಿಸಲಾಗುತ್ತದೆ.

ಇಷ್ಟೇ ಅಲ್ಲ ಕರ್ಪೂರದಲ್ಲಿ ಹಲವಾರು ಔಷಧೀಯ ಗುಣಗಳೂ ಇವೆ

ಅಜೀರ್ಣಕ್ಕೆ ರಾಮಬಾಣ:  ಗ್ಯಾಸ್ ಸಮಸ್ಯೆಯಿರುವವರು ತಿನ್ನಲು ಯೋಗ್ಯವಾದ ಕರ್ಪೂರ  ಅಂದ್ರೆ ಪಚ್ಚೆ ಕರ್ಪೂರ ಸೇವಿಸಿದರೆ ಒಳ್ಳೆಯದು. ಇದು ದೇಹದಲ್ಲಿ ಗ್ಯಾಸ್ ತುಂಬಿಕೊಳ್ಳದಂತೆ ಕಾಪಾಡುತ್ತದೆ. ಮಾತ್ರವಲ್ಲ ಆಹಾರ ಪಚನಕ್ರಿಯೆ ಚುರುಕುಗೊಳ್ಳುವಂತೆ ಮಾಡುತ್ತದೆ

ಉರಿಯೂತ: ಗಾಯವಾಗಿ ಉರಿಯೂತ ಅನುಭವಿಸುತ್ತಿದ್ದರೆ ಅಥವಾ ಊದಿಕೊಂಡಿದ್ದರೆ ಆ ಭಾಗಕ್ಕೆ ಕರ್ಪೂರದ ಎಣ್ಣೆಯನ್ನು ಹಚ್ಚಿದರೆ ನೋವು ಶಮನವಾಗುತ್ತದೆ. ದೇಹದಲ್ಲಿ ಮೊಡವೆ ಅಥವಾ ತ್ವಚೆಯ ಮೇಲೆ ಇನ್ಯಾವುದೇ ಸಮಸ್ಯೆಗಳಿದ್ದರೆ ಅಲ್ಲಿಗೆ ಕರ್ಪೂರ ಹಚ್ಚಿದರೆ ಉತ್ತಮ.

ಸ್ನಾಯು ಸೆಳೆತ: ಸ್ನಾಯು ಸೆಳೆತವಿರುವ ಜಾಗಕ್ಕೆ ಕರ್ಪೂರ ಹಚ್ಚಿದರೆ ಸೆಳೆತ ನಿಲ್ಲುತ್ತದೆ

ಶೀತ ನೆಗಡಿ: ಶೀತ ನೆಗಡಿಯಿಂದ ಬಳಲುತ್ತಿದ್ದರೆ, ಮೂಗು ಕಟ್ಟಿದ್ದರೆ ಕರ್ಪೂರದ ಗಂಧವನ್ನು ಒಳಸೇದಿಕೊಳ್ಳುತ್ತಿದ್ದರೆ ಶೀತ ಕಡಿಮೆಯಾಗುತ್ತದೆ

ಕಾಮಾಸಕ್ತಿ:  ಕರ್ಪೂರದ ಗಂಧವು ಕಾಮಾಸಕ್ತಿಯನ್ನೂ ಉತ್ತೇಜಿಸುತ್ತದೆ.

Write A Comment