ಅಂತರಾಷ್ಟ್ರೀಯ

ಇಲ್ಲ, ನಾನು ನಿಮ್ಮನ್ನ ದ್ವೇಷಿಸಲ್ಲ: ಉಗ್ರರಿಗೆ ಪತ್ರ: ಪತ್ನಿಯನ್ನು ಕಳೆದುಕೊಂಡವನಿಂದ ಉಗ್ರರಿಗೊಂದು ಪತ್ರ

Pinterest LinkedIn Tumblr

Antoine-Leiris

ಪ್ಯಾರಿಸ್: ಪ್ಯಾರಿಸ್ ದಾಳಿಯಲ್ಲಿ ಪತ್ನಿಯನ್ನು ಕಳೆದುಕೊಂಡ ಆ್ಯಂಟಾಯಿನ್ ಲೆರಿಸ್ ಎಂಬವರು ತಮ್ಮ ಫೇಸ್ ಬುಕ್‍ನಲ್ಲಿ ಉಗ್ರರಿಗೆ ಪತ್ರವೊಂದನ್ನು ಬರೆದಿದ್ದಾರೆ.

ಆ ಪತ್ರದ ಪೂರ್ಣಪಾಠ ಇಲ್ಲಿದೆ:

“ಶುಕ್ರವಾರ ರಾತ್ರಿ ನೀವು ನನ್ನ ಜೀವನದ ಪ್ರೀತಿಯನ್ನು, ನನ್ನ ಮಗುವಿನ ತಾಯಿಯನ್ನು ಕಸಿದುಕೊಂಡಿರಿ. ಆದರೂ ನಾನು ನಿಮ್ಮನ್ನು ದ್ವೇಷಿಸಲ್ಲ. ಎರಡು ದಿನದ ಕಾಯುವಿಕೆಯ ಬಳಿಕ,  ಕೊನೆಗೂ ಇವತ್ತು ಬೆಳಗ್ಗೆ ನಾನು ನನ್ನ ಪತ್ನಿಯನ್ನು ನೋಡಿದೆ. ಶುಕ್ರವಾರ ಸಂಜೆ ಆಕೆ ಮನೆಯಿಂದ ತೆರಳಿದ್ದಾಗ ಹೇಗಿದ್ದಳೋ, 12 ವರ್ಷಗಳ ಹಿಂದೆ ನಾನು ಆಕೆಯ ಪ್ರೀತಿಯಲ್ಲಿ ಬಿದ್ದಾಗ ಆಕೆ ಹೇಗಿದ್ದಳೋ, ಇಂದೂ ಅಷ್ಟೇ ಸುಂದರವಾಗಿ ಕಾಣುತ್ತಿದ್ದಾಳೆ. ಈಗ ನಾವಿಬ್ಬರೇ. ನಾನು ಮತ್ತು ನನ್ನ 17 ತಿಂಗಳ ಮಗ. ಆದರೂ, ನಾವು ವಿಶ್ವದ ಎಲ್ಲ ಸೇನೆಗಳಿಗಿಂತಲೂ ಬಲಿಷ್ಠರು.

ನೀವು ಯಾವ ದೇವರಿಗಾಗಿ ಈ ರೀತಿ ಕೊಲೆಗಳನ್ನು ಮಾಡುತ್ತಿದ್ದೀರೋ, ಆ ದೇವರು ನನ್ನ ಕಲ್ಪನೆಯಲ್ಲಿ ಹೇಗೆ ಕಾಣುತ್ತಿದ್ದಾನೆ ಗೊತ್ತಾ? ನನ್ನ ಪತ್ನಿಯ ದೇಹ ಹೊಕ್ಕಿರುವ ಪ್ರತಿಯೊಂದು ಗುಂಡುಗಳೂ, ಆ ನಿಮ್ಮ ಭಗವಂತನ ಹೃದಯದಲ್ಲಿ ಗಾಯ ಮೂಡಿಸಿದಂತೆ. ಇಲ್ಲ, ನಾನು ನಿಮ್ಮನ್ನು ದ್ವೇಷಿಸಲ್ಲ. ನನಗೆ ನೋವಾಗಿದೆ ನಿಜ, ಆದರೆ, ಇದು ನಿಮ್ಮ ಸಣ್ಣಮಟ್ಟಿನ ಗೆಲವು ಅಷ್ಟೆ, ಏಕೆಂದರೆ, ಇದು ದೀರ್ಘಕಾಲಿಕ ಗೆಲವಲ್ಲ. ನನಗೆ ಗೊತ್ತು, ಆಕೆ ಪ್ರತಿ ದಿನವೂ ನಮ್ಮೊಂದಿಗಿರುತ್ತಾಳೆ. ಈ ಆತ್ಮಗಳ ಸ್ವರ್ಗದಲ್ಲಿ ನಾವು ಮುಕ್ತವಾಗಿ ಸಂಚರಿಸುತ್ತೇವೆ, ಅಲ್ಲಿಗೆ ಪ್ರವೇಶಿಸಲು

ನಿಮ್ಮಿಂದ ಸಾಧ್ಯವಿಲ್ಲ”.

-ಆ್ಯಂಟಾಯಿನ್ ಲೆರಿಸ್

Write A Comment