ಅಂತರಾಷ್ಟ್ರೀಯ

ಪ್ಯಾರಿಸ್ ದಾಳಿ: ಇಸಿಸ್ ವಿರುದ್ಧ ‘ದಯೆರಹಿತ ಯುದ್ಧ’; ಫ್ರೆಂಚ್ ಅಧ್ಯಕ್ಷ

Pinterest LinkedIn Tumblr

33Francois-Hollandeಫ್ರಾನ್ಸ್: ಪ್ಯಾರಿಸ್ ಭಯೋತ್ಪಾದನಾ ದಾಳಿ ಮಡಿದ 120 ಮಂದಿ ಸಾವಿಗೆ ಕಾರಣಕರ್ತರಾದ ಭಯೋತ್ಪಾದಕರ ವಿರುದ್ಧ ದಯೆರಹಿತ ಹೋರಾಟ ನಡೆಸುವುದಾಗಿ ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಹೇಳಿದ್ದಾರೆ.

ಅಮಾಯಕರ ಜೀವಕ್ಕೆ ಪ್ರತಿಯಾಗಿ ಭಯೋತ್ಪಾದನೆ ವಿರುದ್ಧ ದಯೆ ರಹಿತ ಯುದ್ಧಕ್ಕಾಗಿ ಇನ್ನು ಫ್ರಾನ್ಸ್ ಸಿದ್ಧಗೊಳ್ಳಲಿದೆ. ಈ ದಾಳಿಯಿಂದ ತೀವ್ರ ದುಃಖವಾಗಿದೆಯಾದರೂ, ಭಾವನೆಗಳ ಮೂಲಕ ನಾವು ಪ್ರತಿಕ್ರಯಿಸುವುದಿಲ್ಲ.  ಭಯೋತ್ಪಾದಕರು ಈ ರೀತಿಯಾಗಿ ಫ್ರಾನ್ಸ್ ಮೇಲೆ ಆಕ್ರಮಣ ನಡೆಸಲು ಬಯಸುವುದಾದರೆ ಅದಕ್ಕೆ ನಾವು ತಕ್ಕ ಉತ್ತರ ನೀಡುತ್ತೇವೆ ಎಂದು ಫ್ರಾಂಕೋಯಿಸ್ ಹೇಳಿದ್ದಾರೆ.

ಸಿರಿಯಾದಲ್ಲಿ ಇಸಿಸ್ ವಿರುದ್ಧದ ಯುದ್ಧದಲ್ಲಿ ಫ್ರಾನ್ಸ್ ಭಾಗಿಯಾಗಿರುವುದೇ ದಾಳಿಗೆ ಕಾರಣ. ಇದು ನಿಮ್ಮ ಅಧ್ಯಕ್ಷರ ತಪ್ಪು ಎಂದು ದಾಳಿಕೋರನೋರ್ವ ಕೂಗುತ್ತಿದ್ದುದಾಗಿ ಪ್ರತ್ಯಕ್ಷ ದರ್ಶಿಯೊಬ್ಬ ಹೇಳಿದ್ದಾರೆ. ಇಂದು ಈ ಸಂಬಂಧ ವಿಡಿಯೋ ಬಿಡುಗಡೆಗೊಳಿಸಿರುವ ಇಸಿಸ್ ಫ್ರಾನ್ಸ್ ಸಿರಿಯಾದಲ್ಲಿ ತನ್ನ ವಿರುದ್ಧದ ದಾಳಿ ಮುಂದುವರಿಸುವುದಾದಲ್ಲಿ ಇಂತಹ ದಾಳಿಗಳನ್ನು ನಾವು ಮುಂದುವರಿಸಲಿದ್ದೇವೆ ಎಂದು ಹೇಳಿದೆ.

Write A Comment