ಅಂತರಾಷ್ಟ್ರೀಯ

ರಾಜನ್ ಗಡಿಪಾರು ವಿಚಾರದಲ್ಲಿ ಸ್ಪಷ್ಟನೆ ನೀಡಲು ಸಾಧ್ಯವಿಲ್ಲ: ಗುರ್ಜಿತ್ ಸಿಂಗ್

Pinterest LinkedIn Tumblr

chhota-rajanಬಾಲಿ: ಭೂಗತ ಪಾತಕಿ ಚೋಟಾ ರಾಜನ್ ಗಡಿಪಾರು ವಿಚಾರದಲ್ಲಿ ಸ್ಪಷ್ಟನೆ ನೀಡಲು ಸಾಧ್ಯವಿಲ್ಲ ಎಂದು ಇಂಡೋನೇಷಿಯಾದಲ್ಲಿರುವ ಭಾರತೀಯ ರಾಯಭಾರಿ ಗುರ್ಜಿತ್ ಸಿಂಗ್ ಅವರು ಶುಕ್ರವಾರ ಹೇಳಿದ್ದಾರೆ.

ಚೋಟಾ ರಾಜನ್ ವಿಚಾರದಲ್ಲಿ ಅಧಿಕಾರಿಗಳು ತಡ ಮಾಡುತ್ತಿದ್ದಾರೆಂಬುದೊಂದು ತಪ್ಪಿ ಗ್ರಹಿಕೆ. ಪ್ರಕರಣ ಸಂಬಂಧ ಅಧಿಕಾರಿಗಳು ಕೆಲವು ಕಾರ್ಯವಿಧಾನಗಳನ್ನು ಅನುಸರಿಸಬೇಕಾಗಿದ್ದು, ಈ ಕಾರ್ಯವಿಧಾನಗಳನ್ನು ಪ್ರಕರಣಕ್ಕೆ ಸಂಬಂಧಿತ ಭಾರತೀಯ ಸಂಸ್ಥೆಗಳು ನಿರ್ಧಾರ ಮಾಡುತ್ತದೆ. ಹೀಗಾಗಿ ನಮಗೆ ನೀಡಿದ ನಿರ್ದೇಶನಗಳನ್ನು ನಾವು ಅನುಸರಿಸುತ್ತಿದ್ದೇವೆ. ಪ್ರಕರಣ ಸಂಬಂಧ ನಮ್ಮ ರಾಯಭಾರಿಗಳು ಈಗಾಗಲೇ ಬಾಲಿಗೆ ಹೋಗಿದ್ದು, ಕೇಂದ್ರ ಗೃಹ ಸಚಿವರು ನೀಡಿ ನಿರ್ದೇಶನವನ್ನು ನಾವು ಪಾಲಿಸುತ್ತೇವೆ ಎಂದು ಹೇಳಿದ್ದಾರೆ.

ಅಧಿಕಾರಿಗಳು ನಿರ್ಧಾರ ಹಾಗೂ ಕಾರ್ಯವಿಧಾನಗಳನ್ನು ಹೇಳಿದರೆ ನಾವು ಆ ನಿರ್ದೇಶಕ್ಕನುಗುಣವಾಗಿ ಪಾಲನೆ ಮಾಡುತ್ತೇವೆ. ಪ್ರಸ್ತುತ ಅಗತ್ಯವಿರುವ ಕ್ರಮವನ್ನು ಕೈಗೊಳ್ಳಲಾಗಿದ್ದು, ಕಾರ್ಯವಿಧಾನಗಳು ಪ್ರಗತಿಯಲ್ಲಿವೆ ಎಂದು ಹೇಳಿದ್ದಾರೆ.

ಹಲವು ಪಾತಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ರಾಜನ್ ನೂರಾರು ಹತ್ಯಾ ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಭಾರತದ ಪೊಲೀಸರಿಗೆ ಹೆದರಿ ವಿದೇಶಕ್ಕೆ ಹಾರಿದ್ದ ಚೋಟಾರಾಜನ್ ನನ್ನು ಬಂಧಿಸಿಲು 1995ರಲ್ಲಿ ಕೇಂದ್ರ ಸರ್ಕಾರ ಮತ್ತು ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. ಇದಾಗ್ಯೂ ವಿವಿಧ ವೇಷ ಧರಿಸಿ ತಲೆಮರೆಸಿಕೊಂಡಿದ್ದ  ರಾಜನ್ ನಾನಾ ದೇಶಗಳಿಗೆ ಪರಾರಿಯಾಗುತ್ತಿದ್ದ. ಇದೀಗ ಈತನನ್ನು ಸಿಡ್ನಿ ಪೊಲೀಸರ ಸಹಾಯದಿಂದ ಇಂಡೋನೇಷ್ಯಾ ಪೊಲೀಸರು ಅ.26 ರಂದು ಬಂಧನಕ್ಕೊಳಪಡಿಸಿದ್ದರು.

Write A Comment