ಅಂತರಾಷ್ಟ್ರೀಯ

ಬಲವಂತವಾಗಿ ಪತಿಯನ್ನು ಸತತ 29 ಗಂಟೆಗಳ ಕಾಲ ರೇಪ್ ಮಾಡಿದ ಪತ್ನಿ ! ಈಕೆಯ ವಿಚಾರ ಮುಂದೇನಾಯಿತು ನೀವೇ ಓದಿ….

Pinterest LinkedIn Tumblr

rapeee

ಸಿಯೋಲ್: ಇಷ್ಟು ದಿನ ಮಹಿಳೆಯರ ಮೇಲೆ ಅತ್ಯಾಚಾರವಾಗಿರುವ ಸುದ್ದಿ ಕೇಳಿಬರುತ್ತಿತ್ತು. ಇದೀಗ ಮಹಿಳೆಯೊಬ್ಬಳು ವೈವಾಹಿಕ ಅತ್ಯಾಚಾರ ಪ್ರಕರಣವೊಂದರಲ್ಲಿ ಶಿಕ್ಷೆಗೆ ಗುರಿಯಾಗಿರುವ ಘಟನೆಯೊಂದು ದಕ್ಷಿಣ ಕೊರಿಯಾದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

ಮದುವೆಯಾದ ಮಹಿಳೆಯೊಬ್ಬಳು ತನ್ನ ಪತಿಯ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ದಕ್ಷಿಣ ಕೊರಿಯಾದ ನ್ಯಾಯಾಲಯವೊಂದು ಆಕೆಯನ್ನು ತಪ್ಪಿತಸ್ಥಳೆಂದು ಘೋಷಿಸಿ ಶಿಕ್ಷೆಗೆ ಗುರಿ ಮಾಡಿದೆ. ಶಿಮಾ (40) ಎಂಬ ಮಹಿಳೆ ತನ್ನ ಪತಿಯನ್ನು ಅತ್ಯಾಚಾರ ಮಾಡಿದ ಪತ್ನಿಯಾಗಿದ್ದು, 2015ರ ಮೇ ತಿಂಗಳಿನಲ್ಲಿ ಪತಿಯನ್ನು ರೂಮಿನಲ್ಲಿ ಕೂಡಿ ಹಾಕಿದ ಶಿಮಾ ಬಲವಂತವಾಗಿ ಸತತ 29 ಗಂಟೆಗಳ ಕಾಲ ಆತನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾಳೆಂದು ಅಪಾದಿಸಲಾಗಿದೆ.

ಪ್ರಕರಣ ಕುರಿತು ತನಿಖೆ ನಡೆಸಿದ ಸ್ಥಳೀಯ ಅಧಿಕಾರಿಗಳು ಪತ್ನಿಯನ್ನು ಬಂಧಿಸಿದ್ದು, ತನಿಖೆಯ ವೇಳೆ ಪತ್ನಿಯ ಮೇಲಿನ ಆರೋಪ ಸಾಬೀತಾಗಿದೆ. ವಿವಾಹವಾಗಿದ್ದರೂ ಪತಿ-ಪತ್ನಿಯರ ನಡುವೆ ನಡೆಯುವ ಬಲವಂತದ ಲೈಂಗಿಕ ಕ್ರಿಯೆಯು ಅತ್ಯಾಚಾರಕ್ಕೆ ಸಮಾನವಾದ ಅಪರಾಧ ಎಂದು ದಕ್ಷಿಣ ಕೊರಿಯಾದ ಸುಪ್ರೀಂ ಕೋರ್ಟ್ 2013ರಲ್ಲಿ ಮೊದಲ ಬಾರಿಗೆ ಅಭಿಪ್ರಾಯ ವ್ಯಕ್ತಪಡಿಸಿತ್ತು. ಇದರ ಅನ್ವಯ ನಿನ್ನೆ ವಿಚಾರಣೆ ನಡೆಸಿದ ದಕ್ಷಿಣ ಕೊರಿಯಾ ನ್ಯಾಯಾಲಯ ವೈವಾಹಿಕ ಅತ್ಯಾಚಾರ ಪ್ರಕರಣದನ್ವಯ ಮಹಿಳೆಗೆ ಶಿಕ್ಷೆ ನೀಡಿದೆ.

Write A Comment