ಅಂತರಾಷ್ಟ್ರೀಯ

ಚೀನಾದಲ್ಲಿ ಯುವತಿಯರು ಬಾಡಿಗೆ ಸಿಗುತ್ತಾರೆ…ಯಾಕಾಗಿ ಬಾಡಿಗೆಗೆ ಸಿಗುತ್ತಾರೆ ಗೊತ್ತಾ ..ಇಲ್ಲಿದೆ ಓದಿ…

Pinterest LinkedIn Tumblr

china

ಬೀಜಿಂಗ್: ಮಕ್ಕಳು ಮದುವೆ ವಯಸ್ಸಿಗೆ ಬಂದ ತಕ್ಷಣ ತಂದೆ ತಾಯಿರದ್ದು ಒಂದೇ ಗೋಳು, ಮದುವೆ ಮಾಡಬೇಕೆನ್ನುವುದು. ಇದನ್ನು ತಪ್ಪಿಸಲು ಗೆಳತಿಯರನ್ನು ಮನೆಗೆ ಕರೆತಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುವುದನ್ನು ನೋಡಿರುತ್ತೀರಾ. ಆದರೆ ಇದಕ್ಕಾಗಿ ಹುಡುಗಿಯರನ್ನು ಬಾಡಿಗೆಗೆ ಪಡೆಯುವುದನ್ನು ನೋಡಿದ್ದೀರ!.

ಹೌದು. ಚೀನಾದಲ್ಲಿ ಯುವಕರು ಮದುವೆಯಿಂದ, ಪೋಷಕರ ಕಾಟದಿಂದ ತಪ್ಪಿಸಿಕೊಳ್ಳಲು ಯುವತಿಯರನ್ನು ಬಾಡಿಗೆಗೆ ಪಡೆಯುತ್ತಿದ್ದರಂತೆ. ಇದೀಗ ಚೀನಾದಲ್ಲಿ ಟ್ರೆಂಡ್ ಆಗಿ ಬೆಳೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗುತ್ತಿದೆ. ಅಲ್ಲದೇ ಚೀನಾದ ಮೊಬೈಲ್ ಆಪ್‍ನಲ್ಲಿ ಇದೊಂದು ವ್ಯವಹಾರವಾಗಿ ಬೆಳೆಯತೊಡೆಗಿದೆಯಂತೆ.

ಬಾಡಿಗೆಗೆ ಹುಡುಗಿಯರನ್ನು ಪಡೆಯುವ ಯುವಕರು 10 ಸಾವಿರದವರೆಗೆ ಸಂಭಾವನೆ ನೀಡುತ್ತಾರಂತೆ. ಸದ್ಯ ಚೀನಾದ ವೀಚಾಟ್ ಹಾಗೂ ವಾಟ್ಸಾಪ್‍ನಲ್ಲಿ ಇದರದ್ದೇ ಕಾರುಬಾರು. ಅದರಲ್ಲೂ ಚೀನಾದಲ್ಲಿ ನ್ಯಾಷನಲ್ ಹಾಲಿಡೇ ಇರುವ ಕಾರಣ ಯುವಕರೆಲ್ಲಾ ಪೋಷಕರ ಕಣ್ಣುತಪ್ಪಿಸಲು ಹೀಗೆ ಮಾಡುತ್ತಿದ್ದಾರಂತೆ.

ಬಾಡಿಗೆಗೆ ಹುಡುಗಿ ಯಾಕೆ?: ಚೀನಾದಲ್ಲಿ 27ನೇ ವಯಸ್ಸಿಗೆ ಮದುವೆ ಎಂಬ ನಿಯಮವಿದೆಯಂತೆ. ಅದಾದ ಮೇಲೂ ಮದುವೆಯಾದಗೇ ಇದ್ದರೆ ತ್ಯಾಜ್ಯದ ರೀತಿ(ಲೆಫ್ಟ್‍ಓವರ್) ಸ್ವೀಕರಿಸಲಾಗುತ್ತದೆಯಂತೆ. ಒಂದು ವೇಳೆ ಯುವಕ ಯುವತಿಯರು ಪ್ರೀತಿ ಪ್ರೇಮ ಸಂಬಂಧದಲ್ಲಿದ್ದರೆ ಎಲ್ಲದಕ್ಕೂ ಮಾಫಿ ಸಿಗುತ್ತದೆ. ಹೀಗಾಗಿಯೇ ಯುವಕರು ಈ ಮಾರ್ಗವನ್ನು ಕಂಡುಕೊಂಡಿದ್ದಾರೆ.

Write A Comment