ಅಂತರಾಷ್ಟ್ರೀಯ

ನಾಯಿ ಮರಿ ವಿಷಯ; 11 ವರ್ಷದ ಮಗುವೊಂದು 8 ವರ್ಷದ ಮಗುವಿಗೆ ಗುಂಡಿಟ್ಟು ಹತ್ಯೆ

Pinterest LinkedIn Tumblr

shoot

ಚಿಕಾಗೋ: ನಾಯಿಮರಿಯೊಂದರ ವಿಚಾರವಾಗಿ ಇಬ್ಬರು ಮಕ್ಕಳ ನಡುವೆ ಏರ್ಪಟ್ಟ ಜಗಳ ಎಷ್ಟರ ಮಟ್ಟಿಗೆ ಉಲ್ಭಣಿಸಿತೆಂದರೆ. ಒಂದು ಮಗು ಇನ್ನೊಂದು ಮಗುವನ್ನು ಗುಂಡಿಟ್ಟು ಕೊಂದಿರುವ ಘಟನೆ ನಡೆದಿದೆ.

ಅಮೆರಿಕಾದ ಟೆನಿಸಿ ಎಂಬಲ್ಲಿ ಶನಿವಾರ ಈ ಘಟನೆ ನಡೆದಿದ್ದು, 11 ವರ್ಷದ ಮಗುವೊಂದು ತನ್ನ ನೆರೆಮನೆಯ 8 ವರ್ಷದ ಮಗುವಿನ ಮೇಲೆ ಗುಂಡು ಚಲಾಯಿಸಿದೆ. ಇದರ ಪರಿಣಾಮವಾಗಿ ಮಗು ಮೃತಪಟ್ಟಿದೆ.

ನನ್ನ ಮಗು ಹೊರಗಡೆ ಆಟವಾಡುತ್ತಿತ್ತು. ಅಷ್ಟರಲ್ಲಿ ನೆರೆಮನೆಯ ಮಗು ನಮ್ಮ ನಾಯಿಮರಿಯನ್ನು ತೋರಿಸುವಂತೆ ಮಗುವಿನ ಬಳಿ ಕೇಳಿಕೊಂಡಿತ್ತು. ಆದರೆ ನಾಯಿಮರಿಯನ್ನು ತೋರಿಸಲು ಮಗು ನಿರಾಕರಿಸಿತ್ತು. ಇದಾದ ಕೆಲ ಹೊತ್ತಿನಲ್ಲೇ ಆ ನೆರೆ ಮನೆಯ ಮಗು, ನನ್ನ ಮಗುವನ್ನು ಗುಂಡಿಟ್ಟು ಕೊಂದಿದೆ. ಎಂದು ಮೃತ ಮಗುವಿನ ತಾಯಿ ಲತಾಶಾ ಡಾಯರ್ ತಿಳಿಸಿದ್ದಾರೆ.

ಟಿವಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಮಗುವಿನ ತಾಯಿ ‘ನಾನು ನನ್ನ ಮಗುವನ್ನು ಮತ್ತೆ ನನ್ನ ಮಡಿಲಿನಲ್ಲಿ ಕಾಣಲು ಹಂಬಲಿಸುತ್ತೇನೆ. ಎಲ್ಲರೂ ನಿಮ್ಮ ಮಕ್ಕಳನ್ನು ರಾತ್ರಿ ಮಲಗುವ ವೇಳೆ ಮುದ್ದಿಸಿ ಯಾಕೆಂದರೆ ಮರುದಿನ ನೀವು ನಿಮ್ಮ ಮಗುವನ್ನು ಜೀವಂತವಾಗಿ ನೋಡಲು ಸಾಧ್ಯ ಎಂಬುವುದು ಖಚಿತವಿಲ್ಲ ಎಂದಿದ್ದಾರೆ.

ಅಪರಾಧಿ ಮಗುವಿನ ವಿರುದ್ಧ ಪ್ರಥಮ ದರ್ಜೆಯ ಕೊಲೆ ಪ್ರಕರಣವನ್ನು ದಾಖಲಿಸಿದ್ದು, ಮಗುವನ್ನು ಬಾಲಾಪರಾಧಿ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

Write A Comment