ಅಂತರಾಷ್ಟ್ರೀಯ

ಗೂಗಲ್‍ಗೆ ಆಲ್ಫಾಬೆಟ್ ಹೊಸ ಮಾಲೀಕ

Pinterest LinkedIn Tumblr

googlealphabetವಾಷಿಂಗ್ಟನ್: ನಿರೀಕ್ಷೆಯಂತೆ ಗೂಗಲ್ ಇಂಕ್ ಬದಲಾಗಿದೆ. ಇನ್ನು ಗೂಗಲ್ ಇಂಕ್ ಆಲ್ಫಾಬೆಟ್ ಇಂಕ್ ಆಗಿ ಬದಲಾಗಲಿದೆ. ಇದೇ ಹೆಸರಿನಲ್ಲಿ  ಷೇರುಮಾರುಕಟ್ಟೆಯಲ್ಲೂ  ವ್ಯವಹಾರ ನಡೆಸಲಿದೆ.

ಈ ಹೆಸರು ಬದಲಾವಣೆ ಇಂಟರ್ನೆಟ್‍ನ ದಿಗ್ಗಜನಿಗೆ ಸರ್ಚ್ ಹಾಗೂ ಜಾಹೀರಾತು ಉದ್ಯಮದ ಹೊರಗೂ ಉದ್ಯಮವನ್ನು ವಿಸ್ತರಿಸಲು ಅವಕಾಶ ಮಾಡಿಕೊಡಲಿದೆ. ಸದ್ಯ ಗೂಗಲ್ ಇಂಕ್  ಕಂಪನಿಯು ಸರ್ಚ್ ಎಂಜಿನ್, ಜಾಹೀರಾತು, ಆರೋಗ್ಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದೆ. ಸದ್ಯ ಆಲ್ಫಾಬೆಟ್ ಇಂಕ್ ಬಹುರಾಷ್ಟ್ರೀಯ ಕಂಪನಿಯು ನೆಸ್ಟ್, ಗೂಗಲ್ ಎಕ್ಸ್, ಗೂಗಲ್  ಕ್ಯಾಪಿಟಲ್, ಗೂಗಲ್ ವೆಂಚರ್ಸ್, ಕಾಲಿಕೋ, ಲೈಫ್ಸೈನ್ಸಸ್, ಸೈಡ್‍ವಾಲ್ಕ್ ಲ್ಯಾಬ್ಸ್‍ಗಳನ್ನು ಒಳಗೊಂಡಿದೆ. ಗೂಗಲ್ ಸರ್ಚ್ ಎಂಜಿನ್, ಜಾಹೀರಾತು ಕಂಪನಿ, ಆ್ಯಂಡ್ರಾಯಿಡ್,  ಯೂಟ್ಯೂಬ್‍ಗಳು ಆಲ್ಫಾಬೆಟ್‍ನ ಸಹವರ್ತಿ ಕಂಪನಿಗಳಾಗಲಿವೆ.

ಇಷ್ಟಾದರೂ ಕಂಪನಿ ಹಳೆಯ ಟಿಕರ್ ಚಿಹ್ನೆಯನ್ನು ಹಾಗೆಯೇ ಉಳಿಸಿಕೊಳ್ಳಲಿದೆ. ಗೂಗಲ್ ಸಂರಚನೆಯಲ್ಲಿ ಬದಲಾವಣೆ ಮಾಡುವ ವಿಚಾರ ಆಗಸ್ಟ್‍ನಲ್ಲೇ ಕೇಳಿಬಂದಿತ್ತು. ಗೂಗಲ್ ತನ್ನ  ಹೆಸರು ಬದಲಿಸಲಿದೆ ಎನ್ನುವ ವಿಚಾರ ಹೊರಬೀಳುತ್ತಿದ್ದಂತೆ ಆ ಕುರಿತು ಕುತೂಹಲ ವ್ಯಕ್ತಪಡಿಸಿದಕ್ಕಿಂತ ಅದನ್ನು ಜೋಕ್ ಆಗಿ ಪರಿಗಣಿಸಿದ್ದೇ ಹೆಚ್ಚು. ಆದರೆ ಆ ಜೋಕ್ ಈಗ ನಿಜವಾಗಿದೆ.

ಭಾರತೀಯ ಮೂಲದ ಸುಂದರ್ ಪಿಚೈ ಗೂಗಲ್ ಮುಖ್ಯಸ್ಥರಾಗಿ ಮುಂದುವರಿದರೆ, ಗೂಗಲ್‍ನ ಸಹ ಸಂಸ್ಥಾಪಕ ಲ್ಯಾರಿ ಪೇಜ್ ಮುನ್ನಡೆಸಲಿದ್ದಾರೆ. ಅಲ್ಲದೆ, ಗೂಗಲ್‍ನ ಪ್ರತಿ ಘಟಕಕ್ಕೂ ಅದರಲ್ಲೇ ಆದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇರಲಿದ್ದಾರೆ. ಗೂಗಲ್‍ನ ಈ ನಿರ್ಧಾರವನ್ನು ಹೂಡಿಕೆದಾರರು ಸ್ವಾಗತಿಸಿದ್ದಾರೆ. ಈ ಬದಲಾವಣೆ ಕಂಪನಿಯ ಹಣಕಾಸು ಸಾಧನೆ ಕುರಿತು  ಸರಿಯಾದ ಸ್ಪಷ್ಟತೆ ನೀಡುತ್ತದೆ ಎಂದು ಹೇಳಿದ್ದಾರೆ.

ಯಾಕೆ ಬದಲಾವಣೆ?

ಇಂಟರ್ನೆಟ್‍ನ ಹೊರಗೂ ಕಂಪನಿಯ ಅಸ್ತಿತ್ವವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ.

ಗೂಗಲ್‍ನ ಇತರೆ ಉದ್ಯಮಕ್ಕೆ ಹೆಚ್ಚು ಗಮನ ನೀಡುವ ನಿಟ್ಟಿನಲ್ಲಿ.

Write A Comment