ಅಂತರಾಷ್ಟ್ರೀಯ

ಪುರುಷರಿಗೆ ಹೇಳದೆ ಬರುವ 7 ಕ್ಯಾನ್ಸರ್ ಗಳು

Pinterest LinkedIn Tumblr

men-sadಹೆಚ್ಚು ಕ್ಯಾನ್ಸರ್ ಬರುವುದು ಪುರುಷರಿಗಿಂತ ಮಹಿಳೆಯರಿಗೆ ಅಂತ ವೈದ್ಯಲೋಕ ಎಂದೋ ರಿಪೋರ್ಟ್ ಕೊಟ್ಟಾಗಿದೆ. ಆದರೆ, ಪುರುಷರು ತಾವು ಸೇಫ್  ಎಂದುಕೊಳ್ಳುವ ಹಾಗಿಲ್ಲ. ಈ ಮಾರಕ ರೋಗ ಯಾವಾಗ ಬೇಕಾದರೂ ದಾಳಿ ಇಡಬಹುದು. ಇದು ಹೀಗೆ ದಾಳಿ ಇಡುವಾಗ ಆರಂಭದಲ್ಲಿ ಕೆಲವು ಲಕ್ಷಣಗಳನ್ನು ನಿಮ್ಮ ಮುಂದಿಡುತ್ತದೆ. ಕೂಡಲೇ ಎಚ್ಚೆತ್ತುಕೊಂಡರೆ ಆದಷ್ಟು ಅವಘಡವನ್ನು ಮುಂದೂಡಬಹುದು. ಪುರುಷರೇ ಈ 5 ಲಕ್ಷಣಗಳನ್ನು ಯಾವತ್ತೂ ನಿರ್ಲಕ್ಷ್ಯ ಮಾಡದಿರಿ.

ಪದೇಪದೆ ತೀರಾ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದರೆ ನೆಗ್ಲೆಟ್ ಮಾಡ್ಬೇಡಿ. ಇದು ಕರುಳು ಕ್ಯಾನ್ಸರ್ ಲಕ್ಷಣವೂ ಹೌದು. ರಕ್ತ ಕ್ಯಾನ್ಸರ್ ಇದ್ದವರಿಗೂ ಹೀಗೆ ಹೊಟ್ಟೆ ನೋವು ಬರುತ್ತೆ. ಜೀವವನ್ನೇ ಹಿಂಡುವಂಥ ಹೊಟ್ಟೆನೋವಾಗಿದ್ದು, ಕಣ್‍ಕತ್ತಲೆ ಬಂದಹಾಗಾಗುತ್ತೆ.

ತುತ್ತು ನುಂಗುವಾಗ ತುಂಬಾ ಕಷ್ಟ ಪಡುತ್ತಿದ್ದರೆ ಅದು ಮೇಲು ಗಂಟಲಿನಲ್ಲಾ, ಗಂಟಲಿನ ತುಸು ಕೆಳಭಾಗದಲ್ಲಾ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ಮೇಲು ಗಂಟಲಿನಲ್ಲಾಗಿದ್ದರೆ ಅದು ಮಾಮೂಲಿಯಾಗಿ ಇನ್ ಫೆಕ್ಷನ್ ಆದಾಗ ಬರುವಂಥ ನೋವು. ಕೆಳಭಾಗದಲ್ಲಾದರೆ ಅದು ಶ್ವಾಸಕೋಶ ಕ್ಯಾನ್ಸರಿನ ಲಕ್ಷಣವೂ ಆಗಿರಬಹುದು. ನೆನಪಿರಲಿ, ಇಂಥವರಿಗೆ ಬಿಟ್ಟೂಬಿಡದೆ ಕೆಮ್ಮು ಕೂಡ ಬರುತ್ತೆ.

ಕೆಲವರಿಗೆ ಮೂತ್ರ ವಿಸರ್ಜಿಸುವಾಗ ಉರಿ ಆಗುತ್ತೆ. ತೀರಾ ಉಷ್ಣ ಆದಾಗ ಈ ಸಮಸ್ಯೆ ಕಾಡೋದು ನಿಜ. ಆದರೆ, ಪ್ರಾಸ್ಟೇಟ್ ಕ್ಯಾನ್ಸರ್‍ನ ಆರಂಭದಲ್ಲೂ ಹೀಗಾಗಬಹುದು. ಈ ವೇಳೆ ದೇಹವನ್ನು ನೀವೆಷ್ಟೇ ತಂಪು ಮಾಡಿದರೂ ಉರಿ ಗುಣ ಆಗೋದಿಲ್ಲ. ವೈದ್ಯರನ್ನು ಕಾಣುವುದೊಳಿತು.

ಇನ್ನು ನಿಮ್ಮ ಚರ್ಮ. ಬಿಸಿಲಿಗೆ ಕಪ್ಪಾಗೋದು, ದೇಹ ಕೂಲ್ ಆಗಿದ್ದಾಗ ಬೆಳ್ಳಗಾಗೋದು ಮಾಮೂಲಿ. ಆದರೆ, ಕೆಲವು ವೇಳೆ ಚರ್ಮ ತನ್ನಿಷ್ಟ ಬಂದ ಬಣ್ಣಕ್ಕೆ ತಿರುಗುತ್ತದೆ. ಚರ್ಮ ಕ್ಯಾನ್ಸರ್ ಇರುವ ಬಹುತೇಕರಿಗೆ ಹೀಗಾಗುತ್ತದೆ.  ಚರ್ಮತಜ್ಞರನ್ನು ತಪ್ಪದೇ ಸಂಪರ್ಕಿಸಿ.

ತಿಂಗಳಲ್ಲಿ ಒಂದೆರಡು ಕೆಜಿ ತೂಕ ಇಳಿಯುವುದು ಸಹಜ. ಆದರೆ, ಈ ತೂಕ ಐದಾರು ಕೆಜಿಗಿಂತ ಜಾಸ್ತಿ ಇಳಿದರೆ ದೇಹದೊಳಗೆ ಯಾವುದೋ ಕ್ಯಾನ್ಸರ್ ಇದೆ ಎಂದು ವೈದ್ಯರು ಶಂಕಿಸಬಹುದು. ಎಲ್ಲ ಪ್ರಕಾರದ ಕ್ಯಾನ್ಸರ್‍ಗಳೂ ದೇಹದ ತೂಕವನ್ನು ಕುಗ್ಗಿಸುತ್ತವೆ.

ಆಗಾಗ್ಗೆ ವೃಷಣವನ್ನೂ ಗಮನಿಸಬೇಕಾಗುತ್ತದೆ. ಅಲ್ಲಲ್ಲಿ ಗಂಟು ಗಂಟು ಕಂಡುಬಂದರೆ, ವೃಷಣದ ಬಣ್ಣ ತೀರಾ ಗಾಢವಾಗಿದ್ದರೆ ಅದರ ಮೇಲೊಂದು ಅನುಮಾನ ವ್ಯಕ್ತಪಡಿಸಲೇಬೇಕು. ಈ ವೇಳೆ ವೃಷಣದಲ್ಲಿ ನೋವೂ ಕಾಣಿಸಿಕೊಳ್ಳಬಹುದು. ಇದು ವೃಷಣ ಕ್ಯಾನ್ಸರಿನ ಲಕ್ಷಣ.

ಗುಣವೇ ಆಗದ ಜ್ವರ ಕೂಡ ಕ್ಯಾನ್ಸರ್‍ನ ಲಕ್ಷಣವೇ. ರಕ್ತ ಕ್ಯಾನ್ಸರ್ ಇರುವವರಿಗೆ ಹೀಗಾಗುವುದು ಸಹಜ. ಮೆದುಳು ಮೊದಲಿನ ಚೈತನ್ಯ ಕಳೆದುಕೊಂಡಂತಾಗಬಹುದು. ತಲೆನೋವು ಹೌದು, ಆದರೆ ತಲೆನೋವು ಅಲ್ಲ ಎನ್ನುವ ದುಃಸ್ಥಿತಿ.

Write A Comment