ಅಂತರಾಷ್ಟ್ರೀಯ

ಮೂತ್ರವಿಸರ್ಜನೆ ಅವಧಿಯ ಸಂಶೋಧನೆಗೂ ಇಗ್ ನೊಬೆಲ್ ಪ್ರಶಸ್ತಿ..!

Pinterest LinkedIn Tumblr

Universal-urinationಪ್ರಾಣಿಗಳ ದೇಹಲ ಹಲವು ವೈಚಿತ್ರಗಳಿಂದ ಕೂಡಿದ್ದು, ಪ್ರಪಂಚದಲ್ಲಿರುವ ಎಲ್ಲ ಪ್ರಾಣಿಗಳ ಮೂತ್ರ ವಿಸರ್ಜನೆಯ ಅವಧಿಯನ್ನು ಶೋಧಿಸಿದ ಸಂಶೋಧನೆಗೂ ಇಗ್ ನೊಬೆಲ್ ಪ್ರಶಸ್ತಿ  ಲಭಿಸಿಸಿದೆ. ಇಂತಹ ನಿಯಮವೊಂದನ್ನು ಪ್ರತಿಪಾದಿಸಿರುವ ವಿಜ್ಞಾನಿಗಳು ಎಲ್ಲ ಜೀವಿಗಳ ಸರಾಸರಿ ಮೂತ್ರವಿಸರ್ಜನಾ ಅವಧಿ ಕೇವಲ 21 ಸೆಕೆಂಡು. ಆನೆಯಾಗಲಿ ಮಗುವಾಗಲಿ ಅದಕ್ಕಿಂತ  ಬೇಗ ಮುಗಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೂ ಜೀವಶಾಸ್ತ್ರದ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

600 ಮಕ್ಕಳ ತಂದೆ!

ಮಾನವದೇಹದ ವೈಚಿತ್ರ ವಿಶೇಷಗಳ ಬಗೆಗಿನ ಅಧ್ಯಯನಕ್ಕೆ ಇನ್ನೊಂದು ಇಗ್ ನೊಬೆಲ್ ಲಭಿಸಿದೆ. 17ನೇ ಶತಮಾನದ ಮೊರೊಕ್ಕೊ ಸಾಮ್ರಾಟ ಈ ದಾಖಲೆಯ ವಸ್ತುವಾಗಿದ್ದು, ಜರ್ಮನಿ  ಮತ್ತು ಆಸ್ಟ್ರಿಯಾದ ಗಣಿತಜ್ಞರು ಪ್ರಶಸ್ತಿ ಗಿಟ್ಟಿಸಿದ್ದಾರೆ. 1672ರಲ್ಲಿ ಹುಟ್ಟಿ 55 ವರ್ಷ ಬಾಳಿದ ಸಾಮ್ರಾಟ  ದೈಹಿಕವಾಗಿ ಪ್ರತಿ ದಿನ ಎರಡು ಬಾರಿ ಸೆಕ್ಸ್ ನಡೆಸಿದ್ದಲ್ಲಿ 600 ಮಕ್ಕಳಿಗೆ ಜನ್ಮ  ನೀಡಬಲ್ಲಾತನಾಗಿದ್ದನೆಂದು ಈ ಜೋಡಿ ಸಂಶೋಧಿಸಿದ್ದಾರೆ.

ಹುಹ್ ಎಂಬ ಇಂಗ್ಲಿಷ್ ಉದ್ಗಾರ ಕಂಡುಹಿಡಿದ ಮೂವರು ಸಂಶೋಧಕರಿಗೆ ಸಾಹಿತ್ಯ ಇಗ್ ನೊಬೆಲ್ ನೀಡಲಾಗಿದ್ದರೆ, ಭೂಕಂಪ, ಸುನಾಮಿ ಮುಂತಾದ ನೈಸರ್ಗಿಕ ವಿಕೋಪದಲ್ಲಿ ಬದುಕುಳಿವ  ಮಕ್ಕಳು ಭವಿಷ್ಯದಲ್ಲಿ ಭಾರಿ ಉದ್ಯಮಿಗಳಾಗುತ್ತಾರೆಂದು ಕಂಡು ಹಿಡಿದ ಸಂಶೋಧಕರಿಗೆ ಮ್ಯಾನೇಜ್‍ಮೆಂಟ್ ಇಗ್ ನೊಬೆಲ್ ಸಿಕ್ಕಿದೆ. ವೊರ್ಟೆಕ್ಸ್ ಫ್ಲುಯಿಡ್ ಉಪಕರಣ ಬಳಸಿ ಮೊಟ್ಟೆಯನ್ನು ಬೇಯದ ಸ್ಥಿತಿಯಲ್ಲಿಟ್ಟು ಪ್ರೊಟೀನ್‍ಗಳ ರಚನೆ ಬದಲಿಸುವುದನ್ನು ಕಂಡುಹಿಡಿದಿದ್ದಕ್ಕಾಗಿ ಅಮೆರಿಕ ಮತ್ತು ಆಸ್ಟ್ರೇಲಿಯದ ರಸಾಯನಶಾಸ್ತ್ರಜ್ಞರಿಗೆ ಕೆಮಿಸ್ಟ್ರಿ ಇಗ್ ನೊಬೆಲ್ ನೀಡಲಾಗಿದೆ.

ಆ್ಯನಲ್ಸ್  ಆಫ್ ಇಂಪ್ರಾಬಬಲ್ ರಿಸರ್ಚ್ ಎಂಬ ವಿಜ್ಞಾನ ಹಾಸ್ಯ ನಿಯತಕಾಲಿಕ ಈ ಬಾರಿಯ ಸಮಾರಂಭ ಆಯೋಜಿಸಿದ್ದು 25ನೇ ಪ್ರಶಸ್ತಿ ಪ್ರದಾನ ಸಮಾರಂಭ ಇದಾಗಿದೆ. 1991ರಿಂದ  ನಡೆದುಕೊಂಡು ಬಂದಿರುವ ಈ ಸರಣಿಯಲ್ಲಿ ಕೋಕ ಕೋಲವನ್ನು ವೀರ್ಯನಾಶಕ್ಕೆ ಬಳಸಬಹುದೆಂಬ ಪ್ರಯೋಗವೂ ಪ್ರಶಸ್ತಿ ಗಿಟ್ಟಿಸಿಕೊಂಡದ್ದಿದೆ.

ಯಾವ ಶೋಧನೆ?

-ಮೂಗಿನಹೊಳ್ಳೆ, ಮೇಲ್ದುಟಿ,ಶಿಶ್ನದ ತುದಿಗೆ ಜೇನುಕಚ್ಚಿದರೆ ಜಾಸ್ತಿ ನೋವು ಎಂದಾತನಿಗೂ ಇಗ್ ನೊಬೆಲ್

-ಮೊರೊಕ್ಕೊ ರಾಜ 32 ವರ್ಷಗಳಲ್ಲಿ 600 ಮಕ್ಕಳಿಗೆ ತಂದೆಯಾಗಬಲ್ಲ ಎಂದು ಕಂಡುಹಿಡಿದವನಿಗೆ ಗಣಿತ ವಿಭಾಗದ ಅವಾರ್ಡ್

Write A Comment