ಅಂತರಾಷ್ಟ್ರೀಯ

ಪ್ಲೂಟೊದಲ್ಲೂ ಜಲಚಕ್ರ?

Pinterest LinkedIn Tumblr

nasa__ನ್ಯೂಯಾರ್ಕ್,ಸೆ.18: ಪ್ಲುಟೊ ಕುಬ್ಜ ಗ್ರಹದಲ್ಲಿರುವ ಆಕರ್ಷಕ ಹಿಮ ಪರ್ವತಗಳು, ಉದ್ದಕ್ಕೂ ಹರಡಿಕೊಂಡಿರುವ ಬಯಲು ಪ್ರದೇಶಗಳು ಹಾಗೂ ಸುಂದರವಾಗಿ ಕಾಣುವ ಹಿಮಾಚ್ಛಾದಿತ ಪ್ರದೇಶಗಳ ಛಾಯಾಚಿತ್ರಗಳನ್ನು ನ್ಯೂ ಹಾರಿಝಾನ್ ಬಾಹ್ಯಾಕಾಶ ನೌಕೆಯು ಸೆರೆಹಿಡಿದಿದೆ.

ಹೊಸ ಚಿತ್ರಗಳು ನಾಸಾ ವಿಜ್ಞಾನಿಗಳನ್ನು ದಂಗುಬಡಿಸಿದ್ದು, ಭೂಮಿಯಲ್ಲಿನ ಜಲ ಚಕ್ರದಂತಹ ಪ್ರಕ್ರಿಯೆಗಳು ಅಲ್ಲಿಯೂ ನಡೆಯುತ್ತಿರುವುದಕ್ಕೆ ಇದೊಂದು ಪುರಾವೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಈ ಕುಬ್ಜಗ್ರಹದಲ್ಲಿ ಬಯಲು ಪ್ರದೇಶಗಳು ಹಾಗೂ ಹಿಮನದಿಗಳನ್ನೊಳಗೊಂಡ 11,000 ಅಡಿ ಎತ್ತರದ ಪರ್ವತಗಳು ಇವೆ ಎಂಬ ಚಿತ್ರಗಳನ್ನು ಜು.14ರಂದು ಸೆರೆಹಿಡಿಯಲಾಗಿತ್ತು. ವೌಂಟ್ ಎವರೆಸ್ಟ್‌ನ ತುತ್ತ ತುದಿಗೆ ಪ್ರಪ್ರಥಮವಾಗಿ ತಲುಪಿದ ಸರ್ ಎಡ್ಮಂಡ್ ಹಿಲರಿ ಹಾಗೂ ತೇನ್‌ಸಿಂಗ್ ನೋರ್ಗೆಯವರ ಗೌರವಾರ್ಥ ಇಲ್ಲಿನ ಪರ್ವತಗಳಿಗೆ ನೋರ್ಗೆ ಮೋಂಟೆಸ್ ಹಾಗೂ ಹಿಲರಿ ಮೋಂಟೆಸ್ ಎಂಬ ಹೆಸರನ್ನು ಇಡಲಾಗಿತ್ತು. ಭಾರೀ ನಿಖರತೆಯ ಹಾಗೂ ಉನ್ನತ ಪೃಥಕರಣದ ಕ್ಯಾಮರಾಗಳನ್ನು ಬಳಸಿಕೊಂಡು 11,000 ಮೈಲ್‌ಗಳ ದೂರದಿಂದ ತೆಗೆದ ಛಾಯಾಚಿತ್ರಗಳು ಪ್ಲೂಟೊದ ವಾತಾವರಣದಲ್ಲಿ ಸಸಾರಜನಕವಿದೆ ಎಂಬ ಸುಳಿವನ್ನೂ ನೀಡಿದೆ. ಪ್ಲ್ಲೂಟೊ ನೆಲದಿಂದ ಹಿಡಿದು ಕನಿಷ್ಠ 60 ಮೈಲ್‌ಗಳ ಎತ್ತರದವರೆಗೆ ಇಲ್ಲಿ ಸಣ್ಣ ಗಾತ್ರದ 12ಕ್ಕಿಂತಲೂ ಹೆಚ್ಚಿನ ಪದರಗಳಿವೆ ಎಂಬುದನ್ನು ಅದು ಕಂಡುಕೊಂಡಿದೆ.

Write A Comment