ಅಂತರಾಷ್ಟ್ರೀಯ

ವಲಸಿಗರಿಗೆ ನೆರವು ನೀಡುವುದರಲ್ಲಿ ಅಸಡ್ಡೆ: ಶ್ರೀಮಂತ ಅರಬ್ ರಾಷ್ಟ್ರಗಳ ವಿರುದ್ಧ ಜಾಗತಿಕ ಆಕ್ರೋಶ

Pinterest LinkedIn Tumblr

TK DAYSಬೈರುತ್(ಲೆಬನಾನ್),ಸೆ.6: ವಿಶ್ವದಲ್ಲಿಯೇ ಅತಿಹೆಚ್ಚು ತಲಾ ಆದಾಯವನ್ನು ಹೊಂದಿರುವ ಅರಬ್ ರಾಷ್ಟ್ರಗಳು ಸಿರಿಯನ್ ನಿರಾಶ್ರಿತರ ಬವಣೆಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಸಿರಿಯನ್ ವಲಸಿಗರು ತಮ್ಮ ಜೀವದ ಹಂಗು ತೊರೆದು ಯುರೋಪ್ ತಲುಪುತ್ತಿ ದ್ದಾರೆ. ಈ ಪೈಕಿ ಹಲವು ಮಂದಿ ದಾರಿಯ ಮಧ್ಯೆಯೇ ಸಾವಿಗೀಡಾಗುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಕೆಲವೇ ಮಂದಿ ವಲಸಿಗರಿಗೆ ಮಾತ್ರವೇ ಗಲ್ಫ್ ರಾಷ್ಟ್ರಗಳು ಪುನರ್ವಸತಿ ಕಲ್ಪಿಸಿಕೊಡಲು ತೀರ್ಮಾನಿಸಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ವಲಸಿಗರ ಗುಂಪಿನಲ್ಲಿದ್ದ ಸಿರಿಯನ್ ಮಗುವಿನ ಶವವು ಟರ್ಕಿಯ ಕಡಲ ಕಿನಾರೆಯಲ್ಲಿ ಪತ್ತೆಯಾದ ಬಳಿಕವಂತೂ ಜಗತ್ತಿನ ಮಾನವ ಹಕ್ಕುಗಳ ಗುಂಪುಗಳು ಅರಬ್‌ರಾಷ್ಟ್ರಗಳ ವಿರುದ್ಧ ಕಿಡಿಕಾರಲು ಆರಂಭಿಸಿವೆ. ಶ್ರೀಮಂತ ಅರಬ್ ರಾಷ್ಟ್ರಗಳು ವಲಸಿಗರಿಗೆ ಸಾಕಷ್ಟು ಪ್ರಮಾಣದಲ್ಲಿ ಸಹಾಯ-ಸಲಕರಣೆಗಳನ್ನು ಮಾಡಿಕೊಡುತ್ತಿಲ್ಲ ಎಂದು ಅವು ಆಪಾದಿಸುತ್ತಿವೆ. ಕತರ್ ಹಾಗೂ ಸೌದಿ ಅರೇಬಿಯಾಗಳು ಸಿರಿಯಾದ ಅಧ್ಯಕ್ಷ ಬಶರ್ ಅಲ್ ಅಸಾದ್ ಪರವಾಗಿ ದೊಂಬಿ ನಡೆಸುತ್ತಿರುವ ಬಂಡುಕೋರರಿಗೆ ಹಣಕಾಸಿನ ನೆರವನ್ನು ಒದಗಿಸಿಕೊಡುತ್ತಿದ್ದು, ತಮ್ಮ ಸರಕಾರಕ್ಕೆ ಗೊತ್ತಿದ್ದೋ ಗೊತ್ತಿಲ್ಲದೆಯೇ ಶ್ರೀಮಂತ ಗಲ್ಫ್ ನಾಗರಿಕರು ಸಿರಿಯಾದ ಜಿಹಾದಿ ಪಡೆಗಳಿಗೆ ದೇಣಿಗೆಯನ್ನು ಸಂಗ್ರಹಿಸಿಕೊಡುತ್ತಿದ್ದಾರೆ ಎಂದು ಮಾನವ ಹಕ್ಕುಗಳ ಅಧಿಕಾರಿಗಳು ದೂರುತ್ತಿದ್ದಾರೆ.

Write A Comment