ಅಂತರಾಷ್ಟ್ರೀಯ

ಪತ್ನಿಯೊಂದಿಗೆ ಸಂಬಂಧ ಹೊಂದಿದ್ದವನಿಗೆ ಬ್ಯಾಟ್ ನಿಂದ ಬಡಿದ ವೃದ್ದ

Pinterest LinkedIn Tumblr

beltಅಮೆರಿಕಾ: ತನ್ನ ಪತ್ನಿಯೊಂದಿಗೆ ಸಂಬಂಧ ಹೊಂದಿದ್ದನೆಂಬ ಆಕ್ರೋಶದಿಂದ ವ್ಯಕ್ತಿಯೊಬ್ಬ ಮೇಯರ್ ಒಬ್ಬರ ಮೇಲೆ ಬೇಸ್ ಬಾಲ್ ಬ್ಯಾಟ್ ನಿಂದ ಯದ್ವಾತದ್ವಾ ಥಳಿಸಿರುವ ಘಟನೆ ನಡೆದಿದೆ.

ಅಮೆರಿಕಾದ ತಲ್ಲಾಡೇಗಾ ಮೇಯರ್ ಲ್ಯಾರಿ ಬರ್ಟನ್ ಅವರ ಮೇಲೆ 71 ವರ್ಷದ ಬೆನ್ನಿ ಗ್ರೀನ್ ಎಂಬಾತ ಹಲ್ಲೆ ಮಾಡಿದ್ದು, ಬೆನ್ನಿ ಗ್ರೀನ್ ಪತ್ನಿಯ ಜೊತೆ ಲ್ಯಾರಿ ಬರ್ಟನ್ ಸಂಬಂಧ ಹೊಂದಿದ್ದನೆಂದು ಹೇಳಲಾಗಿದೆ.

ಈ ಕಾರಣಕ್ಕಾಗಿಯೇ ಬೆನ್ನಿ ಗ್ರೀನ್ ತನ್ನ ಪತ್ನಿಯಿಂದ ವಿಚ್ಚೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಪತ್ನಿ, ಲ್ಯಾರಿ ಬರ್ಟನ್ ಜೊತೆಗೆ ಅತ್ಮೀಯ ಭಂಗಿಯಲ್ಲಿರುವ ಮೂರು ವಿಡಿಯೋಗಳನ್ನು ಸಾಕ್ಷಿಯಾಗಿ ನ್ಯಾಯಾಲಯಕ್ಕೆ ಸಲ್ಲಿಸಿದ್ದನೆಂದು ಹೇಳಲಾಗಿದೆ.

ತಮ್ಮ ಸಂಸಾರದಲ್ಲಿ ಬಿರುಕು ಮೂಡಲು ಲ್ಯಾರಿ ಬರ್ಟನ್ ಕಾರಣನೆಂಬ ಆಕ್ರೋಶದಿಂದ ಬೆನ್ನಿ ಗ್ರೀನ್, ಕಾದು ಕುಳಿತು ಆತನ ಮೇಲೆ ಬೇಸ್ ಬಾಲ್ ಬ್ಯಾಟಿನಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಲ್ಯಾರಿ ಬರ್ಟನ್ ಈಗ ಆಸ್ಪತ್ರೆಗೆ ದಾಖಲಾಗಿದ್ದು, ಆರೋಪಿ ಬೆನ್ನಿ ಗ್ರೀನ್ ನನ್ನು ಪೊಲೀಸರು ಬಂಧಿಸಿದ್ದಾರೆ.

Write A Comment