ಅಂತರಾಷ್ಟ್ರೀಯ

ಸೀಟಿಗಾಗಿ ಕಿತ್ತಾಡಿ ಬೆತ್ತಲಾದ ಚೀನಿ ಮಹಿಳೆಯರು

Pinterest LinkedIn Tumblr

womens fight

ಬೀಜಿಂಗ್: ಬಸ್ಸು, ರೈಲು ಹೀಗೆ ಸಾರ್ವಜನಿಕ ಸಾರಿಗೆಯಲ್ಲಿ ಸೀಟಿಗಾಗಿ ಕಿತ್ತಾಟ ಮಾಮೂಲು. ಇದು ನೆರೆಯ ಚೀನಾವನ್ನೂ ಬಿಟ್ಟಿಲ್ಲ. ಬೀಜಿಂಗ್ ಮೆಟ್ರೋ ರೈಲು ಹತ್ತಿದ ಇಬ್ಬರು ಮಹಿಳೆಯರು ಸೀಟಿಗಾಗಿ ಕಿತ್ತಾಡಿ ಕೊನೆಗೆ ಬೆತ್ತಲಾಗಿ ಡಬ್ಲುಡಬ್ಲುಇ ಮಾದರಿಯಲ್ಲಿ ಕಿತ್ತಾಡಿದ್ದಾರೆ.

ರೈಲಿನಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಈ ವಿಡಿಯೊ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿಯ ಚರ್ಚೆಗೆ ಕಾರಣವಾಗಿದೆ.

ಆಗಸ್ಟ್ 2ರಂದು ನಡೆದ ಘಟನೆಯಿದು. ಬೀಜಿಂಗ್ ನಗರದ ಮುಖ್ಯ ರೈಲು ನಿಲ್ದಾಣದಲ್ಲಿ ಬೋಗಿಯೊಳಗೆ ಓಡೋಡಿಬಂದ ಇಬ್ಬರೂ ಏಕಕಾಲಕ್ಕೆ ಒಂದೇ ಸೀಟಿನಲ್ಲಿ ಕುಳಿತುಕೊಳ್ಳಲು ಯತ್ನಿಸಿದರು. ಇದು ಸಾಧ್ಯವಾಗದಾಗ ಪರಸ್ಪರ ಮಾತಿನ ಚಕಮಕಿ ಶುರುವಾಯಿತು. ಅದು ವಿಕೋಪಕ್ಕೆ ತಿರುಗಿ ಒಬ್ಬರನ್ನೊಬ್ಬರು ಬಡಿದಾಡಿಕೊಂಡರು. ಜಗಳದ ಬರದಲ್ಲಿ ಇಬ್ಬರೂ ತಮ್ಮ ವಸ್ತ್ರಗಳನ್ನು ಪರಸ್ಪರ ಎಳೆದುಕೊಂಡು ಬೆತ್ತಲಾದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ.

Write A Comment