ಅಂತರಾಷ್ಟ್ರೀಯ

ಫೇಸ್ ಬುಕ್ ಗೆಳತಿಯನ್ನು ಭೂತಾರಾಧನೆಗೆ ಬಲಿಕೊಟ್ಟ ಭೂಪ

Pinterest LinkedIn Tumblr

1134PAY-Natalia-Andrea-Sena-Bernierಸಾಮಾಜಿಕ ಜಾಲತಾಣ ಫೇಸ್ ಬುಕ್ ಎಷ್ಟು ಉಪಕಾರಿಯಾಗಿದೆಯೋ ಅಷ್ಟೇ ಉಪದ್ರವ ಸೃಷ್ಟಿಸುತ್ತದೆ ಎಂಬುದಕ್ಕೆ ಜ್ವಲಂತ ಉದಾಹರಣೆಯೊಂದು ದೊರೆತಿದೆ.

ಹೌದು. ಕೊಲಂಬಿಯಾದಲ್ಲಿ ಈ ಘಟನೆ ನಡೆದಿದ್ದು 15 ವರ್ಷದ ಬಾಲಕಿಯನ್ನು ಫೇಸ್ ಬುಕ್ ಮೂಲಕ ಗೆಳೆತನ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಆಕೆಯನ್ನು ಹೋಟೆಲ್ ಒಂದಕ್ಕೆ ಕರೆಯಿಸಿ ಭೂತಾರಾಧನೆಯ ಮೂಲಕ ಬಲಿ ನೀಡಿ ತಾನೂ ಸಾವನ್ನಪ್ಪಿದ್ದಾನೆ. ಹೋಟೆಲ್ ನ ರೂಮ್ ನಲ್ಲಿ ಎರಡೂ ಶವಗಳು ಪತ್ತೆಯಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೊಗಾಟಿಯಾ ನಿವಾಸಿಯಾಗಿರುವ ಫರ್ನಾನ್ ವೆಲ್ಲಿಜಿನ್ ಎಂಬಾತ ಮಾನಸಿಕ ಅಸ್ವಸ್ಥನಾಗಿದ್ದನ್ನು ಮಾಂತ್ರಿಕ ಆಚರಣೆಯ ಗೀಳನ್ನು ಹೊಂದಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಫೇಸ್ ಬುಕ್ ಸ್ನೇಹಿತೆಯಾಗಿದ್ದ ನಟಾಲಿಯಾ ಆಂಡ್ರೆ ಬನೇರ್ ಎಂಬ  ಬಾಲಕಿಯನ್ನು ಹೋಟೆಲ್ ಗೆ ಕರೆಯಿಸಿ ಆಕೆಗೆ ವಿಷ ಪ್ರಾಶನ ಮಾಡಿಸಿ ತಾಂತ್ರಿಕ ಕ್ರಿಯೆ ನಡೆಸಿ ತಾನೂ ಸಾವನ್ನಪ್ಪಿದ್ದು ಈಗಾಗಲೇ ಎರಡೂ ಶವಗಳನ್ನು  ವಶಕ್ಕೆ ಪಡೆದಿರುವ ಪೊಲೀಸರುತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment