ಅಂತರಾಷ್ಟ್ರೀಯ

ಇಸಿಸ್ ಉಗ್ರರ ಒತ್ತೆಯಾಳಾಗಿದ್ದ ಭಾರತೀಯರೆಲ್ಲರೂ ಸುರಕ್ಷಿತ : ಕೇಂದ್ರ

Pinterest LinkedIn Tumblr

352028-isisಇಸಿಸ್ ಉಗ್ರರ ಒತ್ತೆಯಾಳಾಗಿ ಇರಿಸಿಕೊಂಡಿದ್ದ 39 ಭಾರತೀಯರು ಸುರಕ್ಷಿತವಾಗಿದ್ದು, ಅವರ ಬಿಡುಗಡೆಗೆ ಸೂಕ್ತ ಕ್ರಮ ಕೈಗೊಂಡಿದ್ದೇವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಲೋಕಸಭೆಯಲ್ಲಿ ಈ ಕುರಿತು ಮಾತನಾಡಿದ ವಿದೇಶ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ.ಸಿಂಗ್, ಇಸಿಸ್ ಉಗ್ರರು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಎಲ್ಲ ಭಾರತೀಯರೂ ಸುರಕ್ಷಿತವಾಗಿದ್ದು ಯಾವುದೇ ಆತಂಕಪಡುವ ಅವಶ್ಯಕತೆಯಿಲ್ಲ ಎಂದರಲ್ಲದೇ  ಭಾರತ ಸರ್ಕಾರ ಇರಾಕ್ ಸರಕಾರದೊಂದಿಗೆ ನಿಕಟ ಹಾಗೂ ನಿರಂತರ ಸಂಪರ್ಕದಲ್ಲಿದ್ದು, ಒತ್ತೆಯಾಳುಗಳ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಬಂಧಿತ ಭಾರತೀಯರ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು  ವಿದೇಶ ಸಚಿವೆ ಸುಷ್ಮಾ ಸ್ವರಾಜ್ ಗಲ್ಫ್ ಸಹಕಾರ ಪರಿಷತ್ತ್‌ ಹಾಗೂ ಇತರೆ ಆಪ್ತ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಿದ್ದು, ಭಾರತೀಯರನ್ನು ಸುರಕ್ಷಿತ ಸ್ಥಳದಲ್ಲಿ ನೆಲೆಯೂರುವಂತೆ ಮಾಡಲು ಸಹಕಾರ ಕೋರಿದ್ದಾರೆ ಎಂಬುದನ್ನು ಇದೇ ಸಮಯದಲ್ಲಿ ಸಿಂಗ್ ವಿವರಿಸಿದ್ದಾರೆ.

Write A Comment