ಅಂತರಾಷ್ಟ್ರೀಯ

99 ವರ್ಷದ ಅಜ್ಜಿ ಗರ್ಭಿಣಿಯಾದ ಕಥೆ !!

Pinterest LinkedIn Tumblr

3789safe_imageಮದುವೆಯಾದ ಮಹಿಳೆಯರು ಗರ್ಭಿಣಿಯಾದರೆ ಸಂತಸ ಪಡುವುದು ಮಾಮೂಲು. ಆದರೆ ಮಹಿಳೆಯೊಬ್ಬಳು ತಾನು ಗರ್ಭಿನಿಯಾಗಿರುವ ವಿಷಯ ಕೇಳಿ ಬೆಚ್ಚಿ ಬಿದ್ದಿದ್ದಾಳೆ. ಏಕೆ ಅಂತೀರಾ..? ಈ ಸ್ಟೋರಿ ಓದಿ.

ಹೌದು. ಲಂಡನ್ ನಲ್ಲಿ ಈ ಘಟನೆ ನಡೆದಿದ್ದು ಹ್ಯಾಂಪ್ ಶೈರ್ ನ ನಿವಾಸಿಯಾಗಿರುವ 99 ವರ್ಷದ ಅಜ್ಜಿ ಡೊರೀಸ್ ಐಲಿಂಗ್ ಎಂಬಾಕೆಗೆ ನಗರದ ಫೇರ್ ಹ್ಯಾಮ್ ಕಮ್ಯೂನಿಟಿ ಆಸ್ಪತ್ರೆಯಿಂದ ಪತ್ರವೊಂದು ಬಂದಿದ್ದು ಈ ಪತ್ರದಲ್ಲಿ ನೀವು ಗರ್ಭವತಿಯಾಗಿದ್ದು ತಕ್ಷಣ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಲಾಗಿತ್ತು.

ಈ ಪತ್ರ ಓದಿದ ಅಜ್ಜಿ ಕಂಗಾಲಾಗಿದ್ದು ನಾನು ಮೂವತ್ತು ವರ್ಷವಾಗಿದ್ದಾಗಲೇ ಮೂರು ಮಕ್ಕಳ ತಾಯಿಯಾಗಿದ್ದು ನನಗೀಗ 20 ಮೊಮ್ಮಕ್ಕಳಿದ್ದಾರೆ ಎಂದು ಪತ್ರಿಕಾಗೋಷ್ಠಿ ಕರೆದು ಸ್ಪಷ್ಟಪಡಿಸಿದ್ದಾಳೆ.

ಅಚ್ಚರಿಯ ವಿಷಯವೆಂದರೆ ಆಸ್ಪತ್ರೆ ಕಳುಹಿಸಿದ ಪತ್ರದಲ್ಲಿ ಆಕೆಯ ಜನ್ಮ ದಿನಾಂಕ ಸರಿಯಾಗಿಯೇ ಇತ್ತು. ಆದರೆ ಸಿಬ್ಬಂದಿಯ ಕಣ್ತಪ್ಪಿನಿಂದ ಈ ಅನಾಹುತ ಸಂಭವಿಸಿದೆ ಎಂದು ಆಸ್ಪತ್ರೆ ಕ್ಷಮೆ ಕೋರಿದೆಯಂತೆ.

Write A Comment