ಅಂತರಾಷ್ಟ್ರೀಯ

ವೈರ್‌ ಇಲ್ಲದೆ, ಸಂಪರ್ಕವೂ ಇಲ್ಲದೆ ಮೊಬೈಲ್, ಲ್ಯಾಪ್‌ಟಾಪ್ ಚಾರ್ಜ್ ಮಾಡಿ

Pinterest LinkedIn Tumblr

mobileಕೊರಿಯಾ: ವೈ-ಫೈನಂತೆಯೇ ಕಾರ್ಯನಿರ್ವಹಿಸುವ ವಿದ್ಯುತ್ ವರ್ಗಾವಣೆಯ ವೈರ್‌ಲೈಸ್ ತಂತ್ರಜ್ಞಾನವನ್ನು ವಿಜ್ಞಾನಿಗಳು ಅಭಿವೃದ್ಧಿಗೊಳಿಸಿದ್ದು, ಇದರಿಂದ ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಫೋನ್‌ಗಳನ್ನು ಸುಲಭವಾಗಿ ಚಾರ್ಜ್ ಮಾಡಬಹುದು.

ಇದುವರೆಗೆ ಕೇವಲ 10 ಸೆ.ಮೀ. ಅಂತರದಲ್ಲಿ ವಿದ್ಯುತ್ ವರ್ಗಾವಣೆಗೆ ಸಾಧ್ಯವಾಗುತ್ತಿದ್ದ ವೈರ್‌ಲೆಸ್‌ ತಂತ್ರಜ್ಞಾನವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲಾಗಿದ್ದು, ಇಂಟರ್ನೆಟ್‌ಗಳಿಗೆ ಬಳಸುವ ವೈ-ಫೈ ಸಂಪರ್ಕದಂತೆಯೇ ಅರ್ಧ ಮೀಟರ್ ಅಂತರದಲ್ಲಿಯೂ ಇದು ಕಾರ್ಯನಿರ್ವಹಿಸಲಿದೆ.

ಚಾರ್ಜ್ ಮಾಡಬಲ್ಲ ಒಂದು ವೈರ್‌ಲೆಸ್ ಉಪಕರಣದಿಂದ ಹಲವಾರು ಸಾಧನಗಳನ್ನು ಏಕಕಾಲದಲ್ಲಿ ಚಾರ್ಜ್ ಮಾಡಬಹುದು.

ಕೊರಿಯಾ ಅಡ್ವಾನ್ಸ್ಡ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಈ ತಂತ್ರಜ್ಞಾನವನ್ನು ರೂಪಿಸಿದೆ. ಪ್ರೊ.ಟಿ.ರಿಮ್ ತಂಡದ ಈ ಅಧ್ಯಯನದ ಫಲಿತಾಂಶ ಐಇಇಇ ಟ್ರ್ಯಾನ್ಸಕ್ಷನ್ಸ್ ಆನ್ ಪವರ್ ಎಲೆಕ್ಟ್ರಾನಿಕ್ಸ್ ನಿಯತಕಾಲಿಕದಲ್ಲಿ ಪ್ರಕಟಿತವಾಗಿದೆ.

Write A Comment