ಅಂತರಾಷ್ಟ್ರೀಯ

ಗ್ರೀಸ್ ಸರ್ಕಾರಕ್ಕೆ ಕೊನೆಗೂ 96 ಶತಕೋಟಿ ಡಾಲರ್ ಯೂರೋಪ್ ಸಾಲ

Pinterest LinkedIn Tumblr

Greeceಬ್ರುಸೆಲ್ಸ್ ನಲ್ಲಿ ನಡೆದ ಯೂರೋ ವಲಯ ನಾಯಕರ ಸಭೆಯಲ್ಲಿ ಗ್ರೀಸ್ ಪ್ರಧಾನಿ ಅಲೆಕ್ಸಿಸ್ ಸಿಪ್ರಸ್ ಜರ್ಮನಿ ಚಾನ್ಸೆಲರ್ ಅಂಜೆಲಾ ಮರ್ಕೆಲ್, ಫ್ರಾನ್ಸ್ ಪ್ರಧಾನಿ ಫ್ರಾಂಕೋಯಿಸ್ ಹೊಲ್ಲೆಂಡ
ಬ್ರುಸೆಲ್ಸ್: ಹಲವು ಸುತ್ತಿನ ಮಾತುಕತೆ ನಂತರ ಗ್ರೀಸ್ ರಾಷ್ಟ್ರ ಕೊನೆಗೂ ತೀವ್ರ ಹಣಕಾಸು ಬಿಕ್ಕಟ್ಟಿನಿಂದ ಪಾರಾಗಲು ಯುರೋ ಕರೆನ್ಸಿ ವಲಯದ ಸಾಲದಾತ ರಾಷ್ಟ್ರಗಳೊಂದಿಗೆ ಸೋಮವಾರ ಒಪ್ಪಂದ ಮಾಡಿಕೊಂಡಿದೆ.

96 ಶತಕೋಟಿ ಡಾಲರ್ ನಷ್ಟು ಮೊತ್ತದ ಸಾಲವನ್ನು ಯೂರೋ ವಲಯದ ರಾಷ್ಟ್ರಗಳಿಂದ ಸ್ವೀಕರಿಸಲು ಗ್ರೀಸ್ ಪ್ರಧಾನಿ ಅಲೆಕ್ಸಿಸ್ ಸಿಪ್ರಸ್ ಒಪ್ಪಿಕೊಂಡಿದ್ದಾರೆ.

ಐರೋಪ್ಯ ಒಕ್ಕೂಟದ ರಾಷ್ಟ್ರಗಳ ಹಣಕಾಸು ಸಚಿವರೊಂದಿಗೆ  ಗ್ರೀಸ್ ನ ಪ್ರಧಾನಿ ಮತ್ತು ಅಧ್ಯಕ್ಷರು ನಿರಂತರ 17 ತಾಸುಗಳವರೆಗೆ ಮಾತುಕತೆ ನಡೆಸಿದ್ದರು.

ಒಪ್ಪಂದವೇರ್ಪಟ್ಟದ್ದನ್ನು ಗ್ರೀಸ್ ಅಧ್ಯಕ್ಷ ಡೊನಾಲ್ಡ್ ಟಸ್ಕ್ ಟ್ವಿಟ್ಟರ್ ನಲ್ಲಿ ಅಧಿಕೃತವಾಗಿ ತಿಳಿಸಿದ್ದು, ಈ ಮೂಲಕ ಗ್ರೀಸ್ ಸರ್ಕಾರ ಮತ್ತು ಸಾಲದಾತ ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯ ಕೊನೆಗೊಂಡಿದೆ.

ಗ್ರೀಸ್ ರಾಷ್ಟ್ರ, ಜೂನ್ 30ರಂದು ಎರಡನೇ ಸಲದ ಸಾಲದ ಮರುಪಾವತಿ ಅವಧಿ ಮುಗಿದ ನಂತರ ಯೂರೋವಲಯದಿಂದ ಮೂರನೇ ಬಾರಿಗೆ ಸಾಲ ಪಡೆಯಲು ಮುಂದಾಗಿತ್ತು. ಗ್ರೀಕ್ ನಲ್ಲಿ ಉಂಟಾಗಿದ್ದ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಸುಮಾರು ಎರಡು ವಾರಗಳ ಕಾಲ ಅಲ್ಲಿನ ಬ್ಯಾಂಕುಗಳ ಸಂಪೂರ್ಣ ವ್ಯವಹಾರಗಳನ್ನು ಸ್ಥಗಿತಗೊಳಿಸಲಾಗಿತ್ತು.

ಆರ್ಥಿಕ ಸುಧಾರಣೆ ಮತ್ತು ಹಣಕಾಸು ನೆರವಿನ ದೃಷ್ಟಿಯಲ್ಲಿ ಯೂರೋ ಕರೆನ್ಸಿ ವಲಯದ ಸಾಲದಾತ ರಾಷ್ಟ್ರಗಳು ನೀಡಲು ಮುಂದಾಗಿವೆ. ಇದರೊಂದಿಗೆ ಗ್ರೀಸ್ ಕೆಲವು ಕಠಿಣ ಹಣಕಾಸು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ಪಿಂಚಣಿ ಕಡಿತ, ತೆರಿಗೆ ಹೆಚ್ಚಳ, ಕಾರ್ಮಿಕ ಸುಧಾರಣೆ ಮತ್ತು ಖಾಸಗೀಕರಣಕ್ಕೆ ಕ್ರಮ ಕೈಗೊಳ್ಳುವಂತೆ ಗ್ರೀಸ್ ಸರ್ಕಾರಕ್ಕೆ ಯೂರೋ ವಲಯ ರಾಷ್ಟ್ರಗಳು ಷರತ್ತು ಹಾಕಿವೆ.

Write A Comment