ಅಂತರಾಷ್ಟ್ರೀಯ

ಹಾಲಿವುಡ್ ಚಿತ್ರದಂತಿದೆ ಈ ಕೈದಿಯ ಪರಾರಿ !

Pinterest LinkedIn Tumblr

8290Guzman_LL1ಮೆಕ್ಸಿಕೋ: ಆತ ಬಿಗಿ ಬಂದೋಬಸ್ತಿನಲ್ಲಿದ್ದ ಖೈದಿ. ಆತನನ್ನು ಬಂಧಿಸಲು ಪೊಲೀಸರು ಪಟ್ಟಿದ್ದ ಹರ ಸಾಹಸ ಅಷ್ಟಿಷ್ಟಲ್ಲ. ಈ ಹಿಂದೆ ಒಮ್ಮೆ ಈತನನ್ನು ಬಂಧಿಸಲಾಗಿತ್ತಾದರೂ ಜೈಲಿನಿಂದ ಪರಾರಿಯಾಗಿದ್ದ. ಹಾಗಾಗಿ ಎರಡನೇ ಬಾರಿಗೆ ಬಂಧನಕ್ಕೊಳಗಾದಾಗ ಅತ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದರೂ ಮತ್ತೆ ಪರಾರಿಯಾಗಿದ್ದಾನೆ.

ಆತನೇ ವಿಶ್ವದ ಸಿರಿವಂತರ ಪಟ್ಟಿಯಲ್ಲಿರುವ ಡ್ರಗ್ ಮಾಫಿಯಾ ಕಿಂಗ್ ಎಂದೇ ಕರೆಸಿಕೊಳ್ಳುವ ಜಾಕ್ವಿನ್ ಎಲ್ ಚಾಪೋ. ಮೆಕ್ಸಿಕೋದ ಗಡಿಯಲ್ಲಿ ಕುಳಿತೇ ಅಂತರಾಷ್ಟ್ರೀಯ ಡ್ರಗ್ಸ್ ವ್ಯವಹಾರವನ್ನು ನಿಯಂತ್ರಿಸುವ ಈತ ಸಿನೋಲಾ ಪ್ರಾಂತ್ಯದಲ್ಲಿ ರಾಬಿನ್ ಹುಡ್ ಎಂಬ ಖ್ಯಾತಿಯನ್ನು ಗಳಿಸಿದ್ದಾನೆ. 1993 ರಲ್ಲಿ ಮೊದಲ ಬಾರಿಗೆ ಈತನ ಬಂಧನವಾಗಿದ್ದು, ಬಳಿಕ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ.

ಬಹು ವರ್ಷಗಳ ನಂತರ ಎರಡನೇ ಬಾರಿಗೆ ಈತನನ್ನು ಬಂಧಿಸಿ ಬಿಗಿ ಭದ್ರತೆಯಲ್ಲಿಟ್ಟಿದ್ದರೂ ಕೇವಲ 17 ತಿಂಗಳ ಅವಧಿಯಲ್ಲೇ ಮತ್ತೊಮ್ಮೆ ಪರಾರಿಯಾಗಿದ್ದಾನೆ. ಈತನಿದ್ದ ಬ್ಯಾರಕ್ ವರೆಗೆ 10 ಅಡಿ ಆಳದ 1.5 ಕಿ.ಮೀ. ವರೆಗೆ ಸುರಂಗ ಕೊರೆಯಲಾಗಿದ್ದು, ಇದರ ಮೂಲಕ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

ತಿಂಗಳುಗಟ್ಟಲೇ ಆತನ ಪರಾರಿಗೆ ಸಂಚು ರೂಪಿಸಿರುವ ಸಹಚರರು ಜೈಲಿನ ಸನಿಹದಲ್ಲಿಯೇ ಮನೆ ಮಾಡಿಕೊಂಡಿದ್ದು, ಆ ಮನೆಯ ಮೂಲಕ ಈತನ ಬ್ಯಾರಕ್ ವರೆಗೆ ಸುರಂಗ ಕೊರೆದಿದ್ದಾರೆ. ಇದಕ್ಕೆ ಜೈಲು ಸಿಬ್ಬಂದಿಗಳ ಸಹಕಾರವೂ ಇರಬಹುದೆಂಬ ಶಂಕೆಯನ್ನು ಸರ್ಕಾರದ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಜಾಕ್ವಿನ್ ಎಲ್ ಚಾಪೋ ಆಪಾರ ಹಣವನ್ನು ಜೈಲು ಸಿಬ್ಬಂದಿಗೆ ನೀಡಿ ಅವರ ಸಹಕಾರದಿಂದ ಪರಾರಿಯಾಗಿರಬಹುದೆಂದು ಹೇಳಲಾಗಿದೆ.

Write A Comment