ಅಂತರಾಷ್ಟ್ರೀಯ

ಬಲಾತ್ಕಾರದ ಸೆಕ್ಸ್ ಸಮರ್ಥಿಸಿಕೊಂಡ ಉಗ್ರರು

Pinterest LinkedIn Tumblr

410girl-ap-v4ಬಾಗ್ದಾದ್: ಮಹಿಳೆಯರ ಅಪಹರಣ ಹಾಗೂ ಅವರೊಂದಿಗೆ ಬಲಾತ್ಕಾರದ ಸೆಕ್ಸ್ ಹೊಂದುವುದನ್ನು ಐಎಸ್ ಉಗ್ರರು ಸಮರ್ಥಿಸಿಕೊಂಡಿದ್ದು ಈ ಕುರಿತು ಹೊರಡಿಸಲಾಗಿರುವ ಕರಪತ್ರದಲ್ಲಿ ತಾವು ಏಕೆ ಈ ಕೃತ್ಯ ಎಸಗುತ್ತಿದ್ದೇವೆಂಬುದನ್ನು ತಿಳಿಸಿದ್ದಾರೆ.

ಐಎಸ್ ಉಗ್ರರ ವಶದಲ್ಲಿರುವ ಇರಾಕಿ ಪಟ್ಟಣ ಮೊಸೂಲ್ ನಲ್ಲಿ ಹಂಚಿರುವ ಕರ ಪತ್ರದಲ್ಲಿ, ಮಹಿಳೆಯರು ಮತ್ತು ಮಕ್ಕಳು ತಮ್ಮ ಸಿದ್ದಾಂತವನ್ನು ಒಪ್ಪದ ಕಾರಣ ತಾವುಗಳು ಈ ಕೃತ್ಯ ಎಸಗುತ್ತಿರುವುದಾಗಿ ಹೇಳಿಕೊಂಡಿದ್ದು ತಮ್ಮನ್ನು ತಾವು ಧರ್ಮ ಹೋರಾಟಗಾರರು ಎಂದು ಕರೆದುಕೊಂಡಿದ್ದಾರೆ. ಮುಸ್ಲಿಮೇತರ ಮಹಿಳೆಯರು ಮತ್ತು ಮಕ್ಕಳನ್ನು ಮಾರಾಟ ಮಾಡಬಹುದು ಹಾಗೂ ಇತರೆಯವರಿಗೆ ಕೊಡುಗೆಯಾಗಿ ನೀಡಬಹುದೆಂದೂ ಅವರು ತಿಳಿಸಿದ್ದಾರೆ.

ಸಿರಿಯಾ ಮತ್ತು ಇರಾಕಿನಲ್ಲಿರುವ ಮಹಿಳೆಯರು ಮತ್ತು ಮಕ್ಕಳು ಐಎಸ್ ಉಗ್ರರ ದೌರ್ಜನ್ಯದಿಂದಾಗಿ ತತ್ತರಿಸಿ ಹೋಗಿದ್ದು, ಮಹಿಳೆಯರನ್ನು ಉಗ್ರರು ತಮ್ಮ ಕಾಮ ತೃಷೆ ತೀರಿಸಿಕೊಳ್ಳಲು ಬಳಸುತ್ತಿರುವುದಲ್ಲದೇ ಒಪ್ಪದವರನ್ನು ನಿರ್ದಾಕ್ಷಿಣ್ಯವಾಗಿ ಕ್ರೂರ ರೀತಿಯಲ್ಲಿ ಹತ್ಯೆ ಮಾಡಲಾಗುತ್ತಿದೆ. ತಾವು ವಶಪಡಿಸಿಕೊಂಡಿರುವ ಪಟ್ಟಣಗಳಲ್ಲಿ ಉಗ್ರರ ಹಾವಳಿ ಮೇರೆ ಮೀರಿದ್ದು ನಾಗರಿಕರು ಪ್ರತಿ ಕ್ಷಣವೂ ಜೀವ ಭಯದಿಂದ ತತ್ತರಿಸುತ್ತಿದ್ದಾರೆ.

Write A Comment