ಅಂತರಾಷ್ಟ್ರೀಯ

ಧರ್ಮ ಪಂಥದ ಪ್ರಚಾರ ಶಂಕೆ: ರಷ್ಯಾದಲ್ಲಿ ಯೋಗ ನಿಷೇಧ

Pinterest LinkedIn Tumblr

mysore-yoga-2

ಲಂಡನ್: ವಿಶ್ವಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಆದರೆ, ಧಾರ್ಮಿಕ ಭಾವನೆಗಳನ್ನು ಬಿತ್ತಬಹುದು ಎಂದು ರಷ್ಯಾದ ಕೇಂದ್ರೀಯ ನಗರದಲ್ಲಿ ಯೋಗ ತರಗತಿಗಳನ್ನು ನಿಷೇಧಿಸಲಾಗಿದೆ.

ಕೇಂದ್ರ ನಗರವಾದ ನಿಜ್ನೆವಾರ್ಟೊವಸ್ಕ್‌ನಲ್ಲಿ ಎರಡು ಕಡೆ ಯೋಗ ತರಗತಿಗಳನ್ನು ನಿಷೇಧಿಸಲಾಗಿದೆ. ವಿವಿಧ ಆಸನಗಳನ್ನೊಳಗೊಂಡ, ಮೊದಲು ಹಿಂದುಗಳ ಆರಾಧ್ಯ ದೇವ ಶಿವ ಅಭ್ಯಾಸ ಮಾಡಿದ ಎನ್ನಲಾದ ಹಠ ಯೋಗವನ್ನು ಇಲ್ಲಿ ಹೇಳಿ ಕೊಡಲಾಗುತ್ತಿತ್ತು.

ರಷ್ಯಾದ ಬಾಲಿವುಡ್ ತಾರೆ ಇಂದ್ರಾ ದೇವಿ 100 ವರ್ಷಗಳ ಹಿಂದೆಯೇ ಈ ಹಠ ಯೋಗವನ್ನು ಎಲ್ಲೆಡೆ ಪ್ರಸಿದ್ಧಿಗೊಳಿಸಿದ್ದು, ಅಮೆರಿಕ ಸೇರಿದಂತೆ ಎಲ್ಲೆಡೆ ಇದಕ್ಕೆ ಉತ್ತಮ ಪ್ರತಿಕ್ರಿಯೆ ಇದೆ. ಇದೀಗ, “ಹೊಸ ಧಾರ್ಮಿಕ ಪಂಥದ ಹುಟ್ಟು ಮತ್ತು ಪ್ರಚಾರಕ್ಕೆ ಕಾರಣವಾಗುವ” ಈ ಯೋಗ ತರಗತಿಗಳನ್ನು ಮುನಿಸಿಪಲ್ ಕಟ್ಟಡಗಳಿಂದ ತೆರವುಗೊಳಿಸುವಂತೆ ಆದೇಶಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಭಾರತದ ಪುರಾತನ ವಿದ್ಯೆಯಾದ ಯೋಗವು ದೇಹ ಮತ್ತು ಮನಸ್ಸನ್ನು ನಿಯಂತ್ರಣದಲ್ಲಿಡಲು ಸಹಕರಿಸುತ್ತದೆ, ಎಂಬ ಕಾರಣಕ್ಕೆ ವಿಶ್ವಸಂಸ್ಥೆ ಜೂ.21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಿತ್ತು.

Write A Comment