ಅಂತರಾಷ್ಟ್ರೀಯ

ಹೊರಬಂತು ಒಸಾಮ ಬಿನ್‌ ಲಾಡೆನ್ ಸಾವಿನ ನೈಜ ರಹಸ್ಯ ..?

Pinterest LinkedIn Tumblr

9139ladenಆಲ್ ಖೈದಾ ಉಗ್ರ ಸಂಘಟನೆಯ ಸ್ಥಾಪಕ ಒಸಾಮ ಬಿನ್‌ ಲಾಡೆನ್ 2005 ರಲ್ಲಿ ಸಹಜವಾಗಿಯೇ ಸಾವನ್ನಪ್ಪಿದ್ದ ಎಂದು  ನಿವೃತ್ತ ಐಎಸ್‌ಐ ಮುಖ್ಯಸ್ಥ ಲೆ.ಜ. ಹಮೀದ್  ಗುಲ್‌ ಹೊಸ ಬಾಂಬ್ ಸಿಡಿಸಿದ್ದಾರೆ.

ಲಾಡೆನ್ ಅಮೆರಿಕ 2011, ಮೇ 2ರಂದು ಪಾಕಿಸ್ಥಾನದ ಅಬೊಟ್ಟಾಬಾದ್‌ನಲ್ಲಿದ್ದ ಅಡಗುತಾಣಕ್ಕೆ ದಾಳಿ ಮಾಡಿ ಕೊಂದಿರುವುದು ಕಟ್ಟುಕತೆ ಯಾಗಿದ್ದು ಆತ  2005ರಲ್ಲೇ ಸಹಜವಾಗಿ ಸಾವನ್ನಪ್ಪಿದ್ದ. ಈ ಕುರಿತಾದ ರಹಸ್ಯ ಸದ್ಯದಲ್ಲಿಯೇ ಹೊರಬೀಳಲಿದ್ದು ಅಮೇರಿಕ ಹೆಣೆದ ಕಟ್ಟು ಕಥೆ ಜನರ ಎದುರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

ಅಮೆರಿಕದ ಸೀಲ್‌ ಪಡೆ ಅಬೊಟ್ಟಾಬಾದ್‌ಗೆ ದಾಳಿ ಮಾಡಿದಾಗ  ಲಾಡೆನ್‌ ಅಲ್ಲಿರಲಿಲ್ಲ. ಆದರೆ ವಿಶ್ವದೆದುರು ತನ್ನನ್ನು ಸಮರ್ಥ ಎಂದು ಬಿಂಬಿಸಲು ಅಮೇರಿಕ ಈ ನಾಟಕವನ್ನು ರೂಪಿಸಿತ್ತು ಎಂದು ಜಿಯೊ ನ್ಯೂಸ್‌ ವಾಹಿನಿಯ ಜಿಗ್ರಾ ಕಾರ್ಯಕ್ರಮದಲ್ಲಿ ಹಮೀದ್‌ ಗುಲ್‌ ತಿಳಿಸಿದ್ದಾರೆ.

Write A Comment