ಅಂತರಾಷ್ಟ್ರೀಯ

ಬೆತ್ತಲೆಯಾಗಿ ಮಲಗಿದ್ರೆ, ಸಕ್ಕರೆ ಕಾಯಿಲೆ ಬರೋದಿಲ್ಲ?

Pinterest LinkedIn Tumblr

screen-shot-2014-06-25-at-9-15-27-pmಬೆತ್ತಲೆಯಾಗಿ ಮಲಗೋದು ಅಂದ್ರೆ.. ಶ್ಶೀ..! ಎಂದು ಮೂಗು ಮುರಿಯುವವರೇ ಹೆಚ್ಚು. ಆದರೆ ಬೆತ್ತಲೆಯಾಗಿ ಮಲಗಿದ್ರೆ.. ನಾಲ್ಕಾರು ವಿಚಾರಗಳಲ್ಲಿ ಪ್ರಯೋಜನ ಇದೆ ಅನ್ನೋದು ಸಮೀಕ್ಷೆಯೊಂದರಲ್ಲಿ ಗೊತ್ತಾಗಿದೆ.

ಈ ಸಮೀಕ್ಷೆ ಅಮೆರಿಕದಲ್ಲಿ ನಡೆಸಲಾಗಿದ್ದು, ಅಲ್ಲಿನ ಯುವಜನತೆಯಲ್ಲಿ ಮೂವರಲ್ಲಿ ಒಬ್ಬರು ರಾತ್ರಿ ಬೆತ್ತಲೆಯಾಗಿ ಮಲಗುತ್ತಾರಂತೆ. ಹೀಗೆ ಮಲಗುವುದರಿಂದ ಮನಸ್ಸು ಹೆಚ್ಚು ಶಾಂತವಾಗಿ, ದೇಹದಲ ಕ್ಯಾಲರಿಗಳು ಕಡಿಮೆಯಾಗುತ್ತವೆ. ಅಲ್ಲದೇ ಸುಖವಾದ ನಿದ್ದೆ ಕೂಡ ಬರುತ್ತದೆ. ಇದರಿಂದ ಸಕ್ಕರೆ ಕಾಯಿಲೆಯಂತಹ ಸಮಸ್ಯೆಗಳು ಹತ್ತಿರ ಸುಳಿಯುವುದಿಲ್ಲ ಎಂದು ಪರಿಣತರು ಹೇಳಿದ್ದಾರೆ. ಪ್ರಮುಖವಾಗಿ ಬೆತ್ತಲೆಯಾಗಿ ಮಲಗಿದ್ರೆ ಒತ್ತಡದ ಜೀವನಕ್ಕೆ ಒಳ್ಳೆ ಮದ್ದೆಂದು ಹೇಳಲಾಗಿದೆ.

ಆನ್‌ಲೈನ್‌ ಮೂಲಕ ಈ ಸಮೀಕ್ಷೆ ನಡೆಸಲಾಗಿದ್ದು, ಸಮೀಕ್ಷೆಯಲ್ಲಿ ಪಾಲ್ಗೊಂಡವರೆಲ್ಲ, ಬೆತ್ತಲೆಯಾಗಿ ಮಲಗಿದ್ರೆ ಚೆನ್ನಾಗಿ ನಿದ್ದೆ ಬರೋದಂತೂ ಖರೇ ಎಂದು ಹೇಳಿದ್ದಾರೆ. ಸಮೀಕ್ಷೆ ಬಗ್ಗೆ ಪರಿಣತರೂ ಅಭಿಪ್ರಾಯ ವ್ಯಕ್ತಪಡಿಸಿದ್ದು, ಬೆತ್ತಲೆಯಾಗಿ ಮಲಗೋದು ಸಾಧ್ಯವಿಲ್ಲ ಅಂದರೆ ಪೈಜಾಮ, ಹತ್ತಿಯಲ್ಲಿ ಮಾಡಿದ ಬಟ್ಟೆ ಹಾಕಿಕೊಂಡು ಮಲಗಬೇಕು. ಸಡಿಲವಾದ ಬಟ್ಟೆಯಿಂದ ರಕ್ತಪರಿಚಲನೆ ಸರಾಗವಾಗುತ್ತದೆ. ದೇಹ ನಿದ್ದೆಯಲ್ಲಿ ಹೆಚ್ಚು ವಿಶ್ರಾಂತಿ ಪಡೆದು ಮರುದಿನ ಚಟುವಟಿಕೆಯಿಂದ ಕೆಲಸ ಮಾಡಲು ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

ಬೆತ್ತಲೆಯಾಗಿ ಮಲಗೋದ್ರಿಂದ ಸುಖನಿದ್ದೆ, ದೇಹಕ್ಕೆ ಸಂಪೂರ್ಣ ವಿಶ್ರಾಂತಿ.
ಬೆತ್ತಲೆಯಾಗಿ ಮಲಗೋದು ಒತ್ತಡದ ಜೀವನಕ್ಕೆ ಪ್ರಮುಖ ಮದ್ದು
ಬೆತ್ತಲೆಯಾಗಿ ಮಲಗೋದು ಸಾಧ್ಯ ಇಲ್ಲ ಅಂದರೆ ಪೈಜಾಮ, ಹತ್ತಿಯಲ್ಲಿ ಮಾಡಿದ ಸಡಿಲವಾದ ಬಟ್ಟೆಗಳು ಬೆಸ್ಟ್‌!
-ಉದಯವಾಣಿ

Write A Comment