ಅಂತರಾಷ್ಟ್ರೀಯ

ಚೀನಾದಲ್ಲೊಂದು ನಾಯಿಮಾಂಸ ತಿನ್ನುವ ಹಬ್ಬ….! ಸಾವಿರಾರು ನಾಯಿಗಳ ಬಲಿಗೆ ವೇದಿಕೆ ಸಿದ್ಧ

Pinterest LinkedIn Tumblr

dogs

ಬೀಜಿಂಗ್, ಜೂ.23: ಪ್ರಾಣಿಪ್ರಿಯರು, ಶ್ವಾನಪ್ರಿಯರು, ಪ್ರಾಣಿದಯಾ ಸಂಘಗಳ ತೀವ್ರ ವಿರೋಧದ ನಡುವೆಯೇ ಚೀನಾದಲ್ಲಿ ನಾಯಿಮಾಂಸ ಖಾದ್ಯಗಳ ಮಹಾ ಉತ್ಸವ ಬರುವ ಸೋಮವಾರ ನಡೆಯಲಿದೆ. ಪ್ರತಿ ವರ್ಷದಂತೆ ಈ ವರ್ಷವೂ ಚೀನಾದ ಯುಲಿನ್ ಉತ್ಸವಕ್ಕಾಗಿ ಸಾವಿರಾರು ನಾಯಿಗಳ ಬಲಿಗೆ ವೇದಿಕೆ ಸಿದ್ಧವಾಗಿದೆ.

ಚೀನಾದ ಗುವಾಂಗ್ಸಿ ಪ್ರಾಂತ್ಯದಲ್ಲಿರುವ ಯುಲಿನ್‌ನಲ್ಲಿ 1981ರಿಂದಲೂ ನಾಯಿಮಾಂಸದ ಖಾದ್ಯಗಳ ರೆಸ್ಟೋರೆಂಟ್ ನಡೆಸುತ್ತಿರುವ ಬಾಸ್‌ನಿಂಗ್ ಎಂಬ ಮಹಿಳೆಯ ಪ್ರಕಾರ ಈ ವರ್ಷ ತನ್ನ ಉದ್ಯಮ ಹೆಚ್ಚಿನ ಆದಾಯ ತರುವ ನಿರೀಕ್ಷೆ ಇದೆಯಂತೆ. ನಿಂಗ್ ಹೊಟೇಲ್‌ಗೆ ಅಂದು ಭೇಟಿ ನೀಡುವ ಸಾವಿರಾರು ಗಿರಾಕಿಗಳು ಕುರಿ, ಬಾತುಕೋಳಿ ಮತ್ತಿತರ ಪ್ರಾಣಿಗಳ ಮಾಂಸಕ್ಕಿಂತಲೂ ಗರಿಗರಿಯಾದ ನಾಯಿ ಮಾಂಸವನ್ನೇ ಹೆಚ್ಚು ಇಷ್ಟ ಪಡುತ್ತಾರಂತೆ.

ಸಾಮಾನ್ಯವಾಗಿ ಜೂನ್‌ನ ಬೇಸಿಗೆಯಲ್ಲಿ ಇಲ್ಲಿನ ರಣಬಿಸಿಲಿನ ಝಳಕ್ಕೆ ಬಳಲಿದ ಜನ ಅಂದು ಯುಲಿನ್‌ನ ನಾಯಿ ಮಾಂಸದ ಉತ್ಸವದಲ್ಲಿ ನಾಯಿ ಮಾಂಸದ ಖಾದ್ಯಗಳನ್ನು ತಿಂದು ದೇಹ ತಂಪು ಮಾಡಿಕೊಳ್ಳುತ್ತಾರಂತೆ. ನಾಯಿಮಾಂಸ ಸೇವನೆಯಿಂದ ದೇಹ ತಂಪಾಗುತ್ತದೆ. ನವಚೈತನ್ಯ ಮೂಡುತ್ತದೆ ಎನ್ನುತ್ತಾನೆ ನಿಂಗ್ ರೆಸ್ಟೋರೆಂಟ್‌ನ ಖಾಯಂ ಗಿರಾಕಿ ಹುವಾಂಗ್.

ಗಿರಾಕಿಗಳ ಬಾಯಿ ಚಪಲ ತೀರಿಸಲು 10 ಸಾವಿರಕ್ಕೂ ಹೆಚ್ಚು ನಾಯಿಗಳ ಮಾರಣ ಹೋಮಕ್ಕೆ ವೇದಿಕೆ ಸಿದ್ಧವಾಗಿದ್ದು, ಪ್ರಾಣಿಗಳ ಹಕ್ಕುಗಳ ಚಳವಳಿಗಾರರು ಎಷ್ಟೇ ತೀವ್ರವಾಗಿ ವಿರೋಧಿಸಿದರೂ, ಇದುವರೆಗೆ ನಾಯಿಮಾಂಸ ಉತ್ಸವವನ್ನು ತಡೆಯಲಾಗಿಲ್ಲ. ಈ ನಾಯಿಗಳನ್ನು ಸಾವಿರಾರು ಮೈಲುಗಳ ದೂರದಿಂದ ತಂತಿಬೋನಿನಲ್ಲಿ ಸಾಗಿಸಲಾಗುತ್ತಿದ್ದು, ಅವಕ್ಕೆ ಅನ್ನಾಹಾರಗಳಿಲ್ಲದೆ ಹಿಂಸಿಸಲಾಗುತ್ತದೆ ಎಂಬುದು ಪ್ರಾಣಿಗಳ ಹಕ್ಕುಗಳ ಹೋರಾಟಗಾರರ ವಾದವಾಗಿದೆ.

Write A Comment