ಅಂತರಾಷ್ಟ್ರೀಯ

ಭಯೋತ್ಪಾದನೆಯನ್ನು ದ್ವೇಷಿಸಿ, ಇಸ್ಲಾಂನಲ್ಲ: ಫ್ರಾನ್ಸ್ ಪ್ರಧಾನಿ

Pinterest LinkedIn Tumblr

manual-valls-french-crash

ಪ್ಯಾರಿಸ್: ಭಯೋತ್ಪಾದನೆಗೂ ಮತ್ತು ಇಸ್ಲಾಂಗೂ ಯಾವುದೇ ಸಂಬಂಧವಿಲ್ಲ ಎಂದು ಮುಸ್ಲಿಂ ಸಮುದಾಯವನ್ನುದ್ದೇಶಿಸಿ ಸಭೆಯಲ್ಲಿ ಇಂದು ಫ್ರಾನ್ಸ್ ಪ್ರಧಾನಿ ಮ್ಯಾನುಯೆಲ್ ವಾಲ್ಸ್ ತಿಳಿಸಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ಪ್ಯಾರಿಸ್ ಚಾರ್ಲಿ ಹೆಬ್ಡೋ ದಾಳಿಯ ನಂತರ ೧೭ ಕ್ಕೂ ಹೆಚ್ಚು ಜನ ಮೃತಪಟ್ಟ ಘಟನೆಯ ನಂತರ ೫೦ ಲಕ್ಷ ಮುಸ್ಲಿಂ ಸಮುದಾಯ ಹೊಂದಿರುವ ಫ್ರಾನ್ಸ್ ನಲ್ಲಿ ಒಳ್ಳೆಯ ಬಾಂಧವ್ಯ ಬೆಳೆಸಿಕೊಳ್ಳಲು ಸಮುದಾಯದ ಮುಖಂಡರೊಂದಿಗೆ ಹಲವಾರು ಸಭೆಗಳನ್ನು ಸರ್ಕಾರ ಹಮ್ಮಿಕೊಂಡಿದೆ.

೧೨೦-೧೫೦ ಮುಸ್ಲಿಮರು ಭಾಗವಹಿಸಿದ್ದ ಈ ಸಭೆಯಲ್ಲಿ ಸಮುದಾಯದ ಮುಖಂಡರು, ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಸಚಿವರು ಪಾಲ್ಗೊಂಡಿದ್ದು, ಧಾರ್ಮಿಕ ಪ್ರದೇಶಗಳು, ಮಾಧ್ಯಮದಲ್ಲಿ ಇಸ್ಲಾಂ ಬಗೆಗಿನ ಚಿತ್ರಣ ಮತ್ತು ಹೊಸ ಮಸೀದಿಗಳನ್ನು ಕಟ್ಟುವ ವಿಷಯಗಳನ್ನು ಚರ್ಚಿಸಲಾಗಿದೆ.

Write A Comment