ಅಂತರಾಷ್ಟ್ರೀಯ

ವ್ಯವಹಾರದ ಲಾಭಕ್ಕಾಗಿ ‘ಅನೈತಿಕ’ ಸಂಬಂಧ ಬೆಳೆಸಿದರೆ ತಪ್ಪಲ್ಲವಂತೆ!

Pinterest LinkedIn Tumblr

3756japan-hostess-bar-sign

ಅಕ್ರಮ, ಅನೈತಿಕ ಸಂಬಂಧಕ್ಕಾಗಿ ಜಗಳ ನಡೆದು ಕೊಲೆಯೊಂದಿಗೆ ಅವಸಾನವಾದ ಘಟನೆಗಳ ಕುರಿತು ಕೇಳಿದ್ದೀರಿ. ಆದರೆ ವ್ಯವಹಾರದ ದೃಷ್ಟಿಯಿಂದ ಅಕ್ರಮ ಸಂಬಂಧ ಇಟ್ಟುಕೊಂಡರೆ ಅದು ತಪ್ಪಲ್ಲ ಎಂದು ಜಪಾನ್ ನ್ಯಾಯಾಲಯವೊಂದು ಆದೇಶ ಹೊರಡಿಸಿ ಅಚ್ಚರಿಗೆ ಕಾರಣವಾಗಿದೆ.

ಹೌದು. ಪ್ರಕರಣವೊಂದರ ವಿಚಾರಣೆ ನಡೆಸಿದ ಜಪಾನ್ ನ ನ್ಯಾಯಾಲಯವೊಂದು ವಿವಾಹೇತರ ಸಂಬಂಧ ಅಕ್ರಮವಲ್ಲ ಎಂದು ತೀರ್ಪು ನೀಡಿದ್ದು ವ್ಯಾಪಾರ ಉದ್ದೇಶಕ್ಕಾಗಿ, ಲಾಭದ ಉದ್ದೇಶಕ್ಕಾಗಿ ಇಂಥ ಸಂಬಂಧ ಇಟ್ಟುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದೆ.

ಟೋಕಿಯೋದ ವಯಸ್ಕರ ಮನೋರಂಜನೆಯ ಕ್ಲಬ್ ವೊಂದರೆ ಒಡತಿ ಜತೆ ತನ್ನ ಸಿರಿವಂತ ಗಂಡ ನಿಯಮಿತ ದೈಹಿಕ ಸಂಪರ್ಕ ಇಟ್ಟುಕೊಂಡಿದ್ದು ತನಗೆ ನ್ಯಾಯ ಒದಗಿಸ ಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದಳು. ಅಲ್ಲದೇ ಗಂಡನ ಈ ವರ್ತನೆಯಿಂದ ಇದರಿಂದ ತನ್ನ ಮನಸಿಗೆ ಘಾಸಿಯಾಗಿದ್ದು, ಆತನಿಂದ ಪರಿಹಾರವಾಗಿ ತನಗೆ 21 ಲಕ್ಷ ರೂಪಾಯಿ ಕೊಡಿಸಬೇಕು ಎಂದು ಮನವಿ ಮಾಡಿದ್ದಳು.

ಆದರೆ ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಇದು ಆರ್ಥಿಕ ಉದ್ದೇಶದ ಮೇಲೆ ಹುಟ್ಟಿಕೊಂಡ ದೈಹಿಕ ಸಂಪರ್ಕ. ಕ್ಲಬ್ ನ ಒಡತಿ ತನ್ನ ಗ್ರಾಹಕರ ಸಂತೃಪ್ತಿಗಾಗಿ, ತನ್ನ ವ್ಯಾಪಾರದಲ್ಲಿ ಲಾಭ ಹೆಚ್ಚಿಸಿಕೊಳ್ಳುವ ಸಲುವಾಗಿ ಸಂಬಂಧ ಇಟ್ಟುಕೊಳ್ಳುವುದನ್ನು ವಿವಾಹೇತರ ಸಂಬಂಧ ಅನ್ನಲಾಗುವುದಿಲ್ಲ. ಇದು ಕೇವಲ ವ್ಯಾವಹಾರಿಕವಷ್ಟೇ. ಇದು ವೇಶ್ಯಾವಾಟಿಕೆಗಿಂತ ಭಿನ್ನವಲ್ಲ. ಆದ್ದರಿಂದ ಇಲ್ಲಿ ಪರಿಹಾರ ನೀಡುವ ಪ್ರಶ್ನೆಯೇ ಇಲ್ಲ. ಹೆಣ್ಣು ಹಣ ಪಡೆಯದೇ ಈ ರೀತಿ ಸಂಬಂಧ ಹೊಂದಿದ್ದರೆ ಅದನ್ನು ಪರಿಗಣಿಸಬಹುದಿತ್ತು ಎಂದು ತೀರ್ಪು ನೀಡುವ ಮೂಲಕ ಅಚ್ಚರಿಗೆ ಕಾರಣವಾಗಿದೆ.

Write A Comment