ಅಂತರಾಷ್ಟ್ರೀಯ

ಸಿಂಹದ ಫೋಟೋ ತೆಗೆಯಲು ಹೋಗಿ ಪ್ರಾಣ ತೆತ್ತಳು; ಮೃತಳ ಕ್ಯಾಮೆರಾದಲ್ಲಿ ಈ ಎಲ್ಲ ದೃಶ್ಯಾವಳಿಗಳು ರೆಕಾರ್ಡ್

Pinterest LinkedIn Tumblr

Lions_Attack

ಜೋಹಾನ್ಸ್ ಬರ್ಗ್, ಜೂ.3: ದಕ್ಷಿಣ ಆಫ್ರಿಕಾದ ಜೊಹಾನ್ಸ್ ಬರ್ಗ್ ವನ್ಯಜೀವಿ ಉದ್ಯಾನದಲ್ಲಿ ಸಿಂಹವೊಂದು ಫೋಟೋ ಕ್ಲಿಕ್ಕಿಸುತ್ತಿದ್ದ ಅಮೆರಿಕದ 22 ವರ್ಷದ ಮಹಿಳೆಯೊಬ್ಬರನ್ನು ಸಾಯಿಸಿದೆ. ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದ ವಾಹನದ ಚಾಲಕನಿಗೂ ಸಹ ಸಿಂಹ ಗಾಯಗೊಳಿಸಿದೆ.

ಭದ್ರತಾ ಅಧಿಕಾರಿಗಳ ಸೂಚನೆಯನ್ನು ಗಮನಕ್ಕೆ ತೆಗೆದುಕೊಳ್ಳದ ಮಹಿಳೆ ಕಾರಿನ ಮುಂದಿನ ಎರಡೂ ಕಿಟಕಿಗಳನ್ನು ತೆಗೆದುಕೊಂಡು ಸಿಂಹಗಳ ಫೋಟೋ ತೆಗೆಯುತ್ತಿದ್ದಳು. ಕಿಟಕಿಯಿಂದ ತಲೆಯನ್ನು ಹೊರಗೆ ಹಾಕಿಕೊಂಡು ಕಾರ್ ಹತ್ತಿರದಲ್ಲಿ ನಿಂತುಕೊಂಡಿದ್ದ ಸಿಂಹವೊಂದರ ಫೋಟೋವನ್ನು ಹತ್ತಿರದಿಂದ ತೆಗೆಯಲು ಯತ್ನಿಸಿದಾಗ ಸಿಂಹ ಆಕೆಯನ್ನು ಹೊರಕ್ಕೆಳೆದು ಸಾಯಿಸಿದೆ. ಆಕೆಯ ರಕ್ಷಣೆಗೆ ಪ್ರಯತ್ನಿಸಿದ ವಾಹನ ಚಾಲಕನಿಗೂ ಸಿಂಹ ಗಾಯಗೊಳಿಸಿದೆ. ಮೃತಳ ಕ್ಯಾಮೆರಾದಲ್ಲಿ ಈ ಎಲ್ಲ ದೃಶ್ಯಾವಳಿಗಳು ರೆಕಾರ್ಡ್ ಆಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Write A Comment