ಅಂತರಾಷ್ಟ್ರೀಯ

ಜಪಾನ್ ನಲ್ಲಿ ಮುಗಿಲೆತ್ತರಕ್ಕೆ ಚಿಮ್ಮಿದ ಜ್ವಾಲಾಮುಖಿ

Pinterest LinkedIn Tumblr

1529n-volcano-f-201505301-870x697

ಇತ್ತೀಚೆಗಷ್ಟೇ ಭೂಮಿಯ ಕಂಪನದಿಂದ ಕಂಗಾಲಾಗಿದ್ದ ಜಪಾನಿನ ಕುಶಿನೆರಬು ದ್ವೀಪದಲ್ಲಿನ ಜ್ವಾಲಾಮುಖಿ ಬಾಯ್ತೆರೆದಿದ್ದು ಆತಂಕಕ್ಕೆ ಕಾರಣವಾಗಿದೆ.

ಜಪಾನ್ ನ ಮೌಂಟ್‌ ಶಿಂದಕೆಯಲ್ಲಿರುವ ಈ ಜ್ವಾಲಾಮುಖಿಯು ಶುಕ್ರವಾರ ಸ್ಥಳೀಯ ಕಾಲಮಾನ ಬೆಳಗ್ಗೆ 10 ಗಂಟೆಯ ಹೊತ್ತಿಗೆ ಸಕ್ರಿಯವಾಗಿ ದಟ್ಟನೆಯ ಕಪ್ಪನೆಯ ಬೂದು ಧೂಮವನ್ನು ಆಗಸದೆತ್ತರಕ್ಕೆ ಉಗುಳಲು ಆರಂಭಿಸಿದ್ದು ಇದರಿಂದ ಪರ್ವತದ ಸುತ್ತಲಿನ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಜನರು ಕಂಗಾಲಾಗಿದ್ದು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಅಲ್ಲದೇ ಈ ದ್ವೀಪದಲ್ಲಿ ಜ್ವಾಲಾಮುಖಿ ಉಗುಳಿರುವ ಕೆಸರು ಇತ್ಯಾದಿಗಳು ದ್ವೀಪದ ವಾಯವ್ಯ ತಟವನ್ನು ತಲುಪಿದ್ದು ಅಲ್ಲಿನ ಜನ ಆತಂಕಗೊಂಡಿದ್ದಾರೆ.ಇಲ್ಲಿನ ಸರ್ಕಾರ ಜನರನ್ನು ಸುರಕ್ಷಿತ ಸ್ಥಳಕ್ಕೆ ಒಯ್ಯಲು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಂಡಿದ್ದು ಈ ಜ್ವಾಲಾಮುಖಿಯಿಂದ ಆಗಿರಬಹುದಾದ ನಷ್ಟ – ಹಾನಿಯನ್ನು ಅಂದಾಜಿಸಲು ಹೆಲಿಕಾಪ್ಟರ್‌ ಮೂಲಕ ಸಮೀಕ್ಷೆಯನ್ನು ಕೈಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment