ಅಂತರಾಷ್ಟ್ರೀಯ

ವಧುದಕ್ಷಿಣೆ ಕೊಡ್ತೀನಿ ಮದುವೆ ಮಾಡಿಕೊಡಿ ಪ್ಲೀಸ್…! ಒಬಾಮಾ ಪುತ್ರಿಗೆ ವಿವಾಹ ಪ್ರಸ್ತಾಪ ಮುಂದಿಟ್ಟ ಕೀನ್ಯಾ ವಕೀಲ

Pinterest LinkedIn Tumblr

malia-obama

ನೈರೋಬಿ: ಭಾರತದಲ್ಲಿ ವರದಕ್ಷಿಣೆಯಾಗಿ ಏನೆಲ್ಲಾ ಪ್ರೀತಿಯ ಬಳುವಳಿ ಕೊಡಬಹುದು? ಸೈಟು, ಮನೆ, ಒಡವೆ, ವಸ್ತ್ರ ಹೀಗೆ ಯೋಚಿಸುವ ನಿಮ್ಮ ಮಿದುಳನ್ನು ಸ್ವಲ್ಪ ಟ್ಯೂನ್ ಮಾಡಿಕೊಳ್ಳಿ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಕುಟುಂಬಕ್ಕೆ ಭಾರಿ ವಧುದಕ್ಷಿಣೆ ಸಿಗಲಿದೆಯಂತೆ!

ಒಬಾಮಾ ಅವರ ಹಿರಿಯ ಪುತ್ರಿ ಮಾಲಿಯಾಳನ್ನು ತನಗೆ ಮದುವೆ ಮಾಡಿಕೊಟ್ಟರೆ ವಧುದಕ್ಷಿಣೆ ರೂಪದಲ್ಲಿ 50 ಹಸು, 70 ಕುರಿ ಹಾಗೂ 30 ಮೇಕೆಗಳನ್ನು ಕೊಡುವುದಾಗಿ ಕೀನ್ಯಾದ ವಕೀಲರೊಬ್ಬರು ಆಫರ್ ಕೊಟ್ಟಿದ್ದಾನೆ.

ಈ ವಕೀಲನ ಹೆಸರು ಕಿಪೊರ್ನೊ. ಈತ 2008ರಲ್ಲಿ ಮಾಲಿಯಾಳಿಗೆ ಮಾರು ಹೋಗಿದ್ದಾನಂತೆ. ಒಂದು ಸಾರಿ ಡೇಟಿಂಗ್‌ಗೆ ಒಪ್ಪಿಕೊಂಡರೆ ತಾನು ಮದುವೆಯಾಗಿ ಪ್ರಾಮಾಣಿಕವಾಗಿ ಸಂಸಾರ ಮಾಡಿಕೊಂಡು ಹೋಗುತ್ತೇನೆಂದು ಈತ ತಿಳಿಸಿದ್ದಾನೆ.

ಕಳೆದ ವರ್ಷ ಜುಲೈನಲ್ಲಿ ಒಬಾಮಾ ಅವರು ಕೀನ್ಯಾಗೆ ಭೇಟಿ ನೀಡಿದ್ದ ವೇಳೆ ಈ ಪ್ರಪೋಸಲ್‌ಅನ್ನು ಒಬಾಮಾ ಅವರ ಮುಂದಿಡಬೇಕು ಎಂದು ಈತ ಪ್ರಯತ್ನಿಸಿದ್ದನಂತೆ. ದುರದೃಷ್ಟವಶಾತ್ ಭದ್ರತೆಯ ಕಾರಣದಿಂದ ಇದು ಸಾಧ್ಯವಾಗಲಿಲ್ಲ ಎಂದು ದಿ ನೈರೊಬಿಯನ್ ಪತ್ರಿಕೆಯು ವರದಿಮಾಡಿದೆ.

”ನನ್ನ ಪ್ರೇಮವು ನಿಷ್ಕಲ್ಮಶ. ಮದುವೆ ಪ್ರಸ್ತಾಪ ಮುಂದಿಡುವಂತೆ ನಮ್ಮ ಫ್ಯಾಮಿಲಿ ಒತ್ತಾಯ ಮಾಡುತ್ತಿದೆ. ಡಿಮ್ಯಾಂಡ್ ಮಾಡಿದರೆ ಇನ್ನೊಂದಷ್ಟು ದನಗಳನ್ನು ಕೊಡುವುದಾಗಿ ಹೇಳಿನೋಡು. ಆದರೆ, ನೀನು ಮಾಲಿಯಾಳನ್ನೇ ಮದುವೆಯಾಗು ಎಂದು ಪೋಷಕರು ಒತ್ತಾಯ ಮಾಡುತ್ತಿದ್ದಾರೆ,” ಎಂದು ಕಿಪೊರ್ನೊ ಹೇಳಿದ್ದಾನೆ.

”ಆಕೆ ನನ್ನ ಕನಸಿನ ರಾಣಿ. ಒಬಾಮಾ ಅವರಿಗೆ ಪತ್ರ ಬರೆದಿದ್ದೇನೆ. ಮುಂದಿನ ಬಾರಿ ಪ್ರವಾಸಕ್ಕೆ ಬರುವಾಗ ಮಾಲಿಯಾಳನ್ನು ಕರೆತನ್ನಿ ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದೇನೆ. ಹಾಗೊಮ್ಮೆ ಒಬಾಮಾ ಅವರು ಮದುವೆಗೆ ಒಪ್ಪಿದರೆ ನೇರವಾಗಿ ಮಾಲಿಯಾಳಿಗೆ ಪ್ರಪೋಸ್ ಮಾಡುತ್ತೇನೆ. ಅವಳೂ ಒಪ್ಪಿದರೆ ಅದರ ಕತೆಯೇ ಬೇರೆ. ನಮ್ಮಲ್ಲಿ ಶಾಂಪೇನ್ ಕುಡಿಯುವ ಸಂಪ್ರದಾಯವಿಲ್ಲ. ಹಾಗಾಗಿ ಅವಳು ಒಪ್ಪಿದರೆ ಬಾಟಲಿ ತುಂಬ ಗಿಣ್ಣು ಹಾಲು ಕೊಡುತ್ತೇನೆ. ಪವಿತ್ರ ಬಳ್ಳಿಯನ್ನು ಆಕೆಯ ತಲೆಗೆ ಕಿರೀಟದಂತೆ ತೊಡಿಸುತ್ತೇನೆ,” ಎಂದು ಈ ಕಿಲಾಡಿ ವಕೀಲ ಹೇಳಿರುವುದಾಗಿ ಪತ್ರಿಕೆಯು ವರದಿಮಾಡಿದೆ.

ಏಕೆ ಈ ಆಪರ್
ಅಮೆರಿಕ ಅಧ್ಯಕ್ಷ ಒಬಾಮಾ ಅವರ ಪೂರ್ವಿಕರು ಕೀನ್ಯಾದ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಈ ಸಮುದಾಯದಲ್ಲಿ ಈಗಲೂ ವಧು ದಕ್ಷಿಣೆ ರೂಪದಲ್ಲಿ ಹಸು-ಕರುಗಳನ್ನು ನೀಡುವ ಸಂಪ್ರದಾಯವಿದೆ.

ವಧು ದಕ್ಷಿಣೆ ಪಟ್ಟಿ
ಹಸುಗಳು-50
ಕುರಿಗಳು-70
ಆಡುಗಳು-30

ಹೆಣ್ಣಿಗೆ ಉಡುಗೊರೆ
ಬಾಟಲಿ ತುಂಬಾ ಗಿಣ್ಣಿನ ಹಾಲು
ಪವಿತ್ರ ಬಳ್ಳಿಯ ಕಿರೀಟ

Write A Comment