ಅಂತರಾಷ್ಟ್ರೀಯ

ಬೆಡ್ ರೂಮಿನಲ್ಲಿ ಮಲಗಿದ್ದ ಕಳ್ಳನೊಂದಿಗೆ ಸೆಲ್ಫಿ ತೆಗೆದುಕೊಂಡ ಯುವತಿ..!

Pinterest LinkedIn Tumblr

7033selfie with a thief

ದುಬೈ: ಕೆಲಸ ಮುಗಿಸಿಕೊಂಡು ತನ್ನ ಮನೆಗೆ ಬಂದ ಯುವತಿಯೊಬ್ಬಳಿಗೆ ಬಾಗಿಲು ತೆರೆದು ಒಳ ಪ್ರವೇಶಿಸುತ್ತಿದ್ದಂತೆಯೇ ಆಶ್ಚರ್ಯ ಕಾದಿತ್ತು. ಆಕೆಯ ಬೆಡ್ ರೂಮಿನಲ್ಲಿ ಪರ ಪುರುಷನೊಬ್ಬ ಆರಾಮಾಗಿ ನಿದ್ರೆ ಮಾಡುತ್ತಿದ್ದ. ಇದನ್ನು ಕಂಡ ಯುವತಿ ಮಾಡಿದ್ದೇನು ಗೊತ್ತಾ. ಈ ಸ್ಟೋರಿ ಓದಿ.

ದುಬೈನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಟುನೇಶಿಯಾದ ಯುವತಿ ಕಛೇರಿ ಕೆಲಸ ಮುಗಿಸಿಕೊಂಡು ಸಂಜೆ ತನ್ನ ಮನೆಗೆ ಬಂದಿದ್ದಾಳೆ. ಈ ವೇಳೆ ಪಾನಮತ್ತನಾಗಿದ್ದ ವ್ಯಕ್ತಿಯೊಬ್ಬ ಆಕೆಯ ಬೆಡ್ ಮೇಲೆ ಗಡದ್ದಾಗಿ ನಿದ್ರೆ ಹೊಡೆಯುತ್ತಿದ್ದುದನ್ನು ಕಂಡು ಕಕ್ಕಾಬಿಕ್ಕಿಯಾಗಿದ್ದಾಳೆ. ಮೊದಲಿಗೆ ಭಯಗೊಂಡರೂ ಆತ ಲೋಕದ ಪರಿವೆಯೇ ಇಲ್ಲದಂತೆ ನಿದ್ರೆ ಮಾಡುತ್ತಿದ್ದುದನ್ನು ಗಮನಿಸಿದ್ದಾಳೆ.

ಬಳಿಕ ತನ್ನ ಸ್ಮಾರ್ಟ್ ಫೋನ್ ತೆಗೆದುಕೊಂಡ ಯುವತಿ ಆತ ಮಲಗಿರುವಂತೆಯೇ ಆತನನ್ನು ಸೇರಿಸಿಕೊಂಡು ಸೆಲ್ಫಿ ತೆಗೆದುಕೊಂಡಿದ್ದಾಳೆ. ಈ ರೀತಿ ನಾಲ್ಕೈದು ಚಿತ್ರಗಳನ್ನು ತೆಗೆದುಕೊಂಡ ಆಕೆ ಮನೆಗೆ ಕಳ್ಳ ನುಗ್ಗಿದ್ದಾನೆಂದು ಪೊಲೀಸರಿಗೆ ಕರೆ ಮಾಡಿದ್ದಾಳಲ್ಲದೇ ಈ ಚಿತ್ರಗಳನ್ನು ಸಾಮಾಜಿಕ ಜಾಲ ತಾಣದಲ್ಲೂ ಪೋಸ್ಟ್ ಮಾಡಿದ್ದಾಳೆ. ಯುವತಿ ಕರೆ ಮೇರೆಗ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಈ ಅಪರಿಚಿತ ವ್ಯಕ್ತಿಯನ್ನು ಬಂಧಿಸಿದ ವೇಳೆ ಆತ ಯುವತಿ ವಾಸವಾಗಿದ್ದ ಅಪಾರ್ಟ್ಮೆಂಟಿನ ವಾಚ್ ಮನ್ ಸ್ನೇಹಿತನಾಗಿದ್ದು, ಆತನೊಂದಿಗೆ ಗುಂಡಿನ ಪಾರ್ಟಿ ಮಾಡಿದ ನಂತರ ಯುವತಿಯ ಮನೆಗೆ ಹೋಗಿ ರೆಸ್ಟ್ ತೆಗೆದುಕೊಳ್ಳುತ್ತಿದ್ದನೆಂಬ ಅಂಶ ತಿಳಿದುಬಂದಿದೆ. ಇದೀಗ ಆತನನ್ನು ಜೈಲಿಗಟ್ಟಲಾಗಿದೆ.

Write A Comment