ಅಂತರಾಷ್ಟ್ರೀಯ

ಅಬ್ಬಾ ! ಈ ಹೋಟೆಲ್ ನ ನಿರ್ಮಾಣ ವೆಚ್ಚವೇ 22, 300 ಕೋಟಿ ರೂಪಾಯಿ!

Pinterest LinkedIn Tumblr

710150521121904-mecca-hotel-large-169

ಸಿರಿವಂತರ ನಾಡು ಸೌದಿ ಅರೇಬಿಯಾ ಇದೀಗ ಮತ್ತೊಂದು ದಾಖಲೆ ಬರೆಯಲು ಮುಂದಾಗಿದ್ದು 22, 300 ಕೋಟಿ ವೆಚ್ಚದಲ್ಲಿ ವಿಶ್ವದಲ್ಲಿಯೇ ಅತಿದೊಡ್ಡ ಹೋಟೆಲ್‌ ನಿರ್ಮಿಸಲು ಯೋಜನೆ ರೂಪಿಸಿದೆ.

ಹೌದು. ಪವಿತ್ರ ಮೆಕ್ಕಾಗೆ ಬರುವ ಲಕ್ಷಾಂತರ ಪ್ರವಾಸಿಗರ ಅನುಕೂಲಕ್ಕಾಗಿ ಸೌದಿ ಅರೇಬಿಯಾ ಸರ್ಕಾರ ಈ ಹೋಟೆಲ್ ನಿರ್ಮಾಣಕ್ಕೆ ಕೈ ಹಾಕಿದ್ದು ‘ಅರ್ಬಾಜ್‌  ಕುದಾಯ್‌’ ಎಂಬ ಹೆಸರಿನ ಈ ಹೋಟೆಲ್ ನಲ್ಲಿ 4 ಹೆಲಿಪ್ಯಾಡ್, 10 ಸಾವಿರ ಕೊಠಡಿ, 70 ರೆಸ್ಟೋರೆಂಟ್‌ ಇರಲಿದೆ.

ಮೆಕ್ಕಾದಲ್ಲಿ ನಿರ್ಮಾಣವಾಗುತ್ತಿರುವ ಈ ಹೋಟೆಲ್  2017ರಲ್ಲಿ ಕಾರ್ಯಾರಂಭ ಮಾಡಲಿದ್ದು  ವಿಶ್ವದ ಅತ್ಯಂತ ಎತ್ತರದ ಕಟ್ಟಡಗಳ ಪೈಕಿ ಮೊದಲನೇ ಸ್ಥಾನದಲ್ಲಿರುವ ಬುರ್ಜ್‌ ಖಲೀಫಾವನ್ನು ಈ ಹೋಟೆಲ್‌ ಮೀರಿಸುವುದರ ಜತೆಗೆ ವಿಶ್ವದಲ್ಲಿಯೇ ದೊಡ್ಡ ಗೋಪುರವನ್ನೂ ಹೊಂದಲಿದೆ.

14 ಲಕ್ಷ ಚದರ ಮೀಟರ್‌ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿರುವ ಈ ಹೋಟೆಲ್‌ನಲ್ಲಿ 44 ಅಂತಸ್ತುಗಳು ಇದ್ದು, 12 ಗೋಪುರಗಳನ್ನು ಒಳಗೊಳ್ಳಲಿದೆ. ಸೌದಿಯ  ರಾಜಮನೆತನಕ್ಕಾಗಿಯೇ ವಿಶೇಷ ಕೊಠಡಿಗಳನ್ನು ವಿನ್ಯಾಸ ಮಾಡಲಾಗುತ್ತಿದ್ದು,ಹೋಟೆಲ್ ನ ಜತೆಗೆ ವಿಶಾಲ ವೇದಿಕೆ ಒಳ ಗೊಂಡ ವಾಣಿಜ್ಯ ಸಂಕೀರ್ಣ, ಬಸ್‌ ನಿಲ್ದಾಣ, ಶಾಪಿಂಗ್‌ ಮಾಲ್‌ ಹಾಗೂ ಪುಡ್‌ ಕೋರ್ಟ್‌ಗಳೂ ‘ಅರ್ಬಾಜ್‌  ಕುದಾಯ್‌’ನಲ್ಲಿರುತ್ತದೆ.

ಈ ಹಿಂದೆ ಲಾಸ್‌ ವೆಗಾಸ್‌ ನಲ್ಲಿರುವ ದಿ ವೆನಿಷಿಯನ್‌ ಹಾಗೂ ದಿ ಪಲಾಝೊ ಹೋಟೆಲ್‌ಗಳು ವಿಶ್ವದಲ್ಲೇ ದೊಡ್ಡವು ಎಂದು ಕೀರ್ತಿಗೆ ಭಾಜನರಾಗಿದ್ದವು. ಆದರೆ ಇದೀಗ ಮತ್ತೊಂದು ದಾಖಲೆ ನಿರ್ಮಿಸಲಿರುವ ಈ ಹೋಟೆಲ್ ನಿರ್ಮಾಣಕ್ಕೆ ಈಗಾಗಲೇ ಸೌದಿ ಸರ್ಕಾರದ ಹಣ ಕಾಸು ಇಲಾಖೆ ಯೋಜನೆಗೆ ಅನುಮತಿ ನೀಡಿದ್ದು, ಏಳು ಸಾವಿರ ಟೆಂಡರ್‌ದಾರರು ನಿರ್ಮಾಣಕ್ಕೆ ಒಲವು ತೋರಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

Write A Comment