ವಿಶ್ವದಲ್ಲಿ ಅಶ್ಲೀಲತೆ ಎಷ್ಟರ ಮಟ್ಟಿಗೆ ಹರಡಿದೆ ಎಂದರೆ ಅದರ ಅಂದಾಜು ಮಾಡುವುದೂ ಕಷ್ಟ. ದಂಪತಿ, ಆನ್ಲೈನ್ ಪೋರ್ನೋಗ್ರಫಿ ಭರದಲ್ಲಿ ಮಗುವನ್ನೇ ಸಾಯಿಸಿದ್ದಾರೆ.
ಹೌದು, ಅಮೆರಿಕಾದಲ್ಲಿ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ 26 ವರ್ಷದ ಸ್ಟೀಫನ್ ಮೈಕೆಲ್ ವಿಲಿಯಮ್ಸ್ ಹಾಗೂ 21 ವರ್ಷದ ಆತನ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಂಪತಿ, ತಮ್ಮಿಬ್ಬರು ಮಕ್ಕಳನ್ನು ಮರೆತು ಆನ್ಲೈನ್ ಪೋರ್ನೋಗ್ರಫಿ ಶೂಟ್ ಮಾಡುವುದರಲ್ಲಿ ಬ್ಯುಸಿಯಾಗಿದ್ದರು. ಎಳೆ ಮಗುವಿಗೆ ಪ್ರತಿದಿನ ಹಾಲು ನೀಡುತ್ತಿರಲಿಲ್ಲ. ದಿನೇ ದಿನೇ ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ವೈದ್ಯರ ಬಳಿಯೂ ಕರೆದೊಯ್ಯಲಿಲ್ಲ.
ತನಿಖೆ ನಂತರ ಮಗು ಆಹಾರವಿಲ್ಲದೇ ಸಾವನ್ನಪ್ಪಿದೆ ಎಂಬುದು ತಿಳಿದು ಬಂದಿದೆ. ಮಗು ಸಾವನ್ನಪ್ಪುತ್ತಿದ್ದರೂ ಏನು ಅನ್ನಿಸಲಿಲ್ಲವಂತೆ. ಇದನ್ನು ದಂಪತಿ ಒಪ್ಪಿಕೊಂಡಿದ್ದಾರೆ. ದಂಪತಿಗೆ 2 ವರ್ಷದ ಇನ್ನೊಂದು ಮಗು ಇದ್ದು, ಅದನ್ನು ರಕ್ಷಿಸಲಾಗಿದೆ.