ಅಂತರಾಷ್ಟ್ರೀಯ

ಅನಿವಾಸಿ ಭಾರತೀಯನಿಂದ ಸಾವಿರಾರು ಕೋಟಿ ಡಾಲರ್ ಪಂಗನಾಮ

Pinterest LinkedIn Tumblr

7385nri

ನೂರಾರು ಮಂದಿ ಹೂಡಿಕೆದಾರರಿಗೆ ಸಾವಿರಾರು ಡಾಲರ್‌ಗಳ ವಂಚನೆ ಮಾಡಿರುವ ಭಾರತ ಮೂಲದ ವ್ಯಕ್ತಿಯೊಬ್ಬ ಅಮೇರಿಕಾದಲ್ಲಿ ಜೈಲು ಸೇರುವುದು ಖಚಿತವಾಗಿದೆ.

ವಾಷಿಂಗ್ಟನ್ ಬಿಸಿನೆಸ್ ಸ್ಕೂಲ್ ಯೂನಿವರ್ಸಿಟಿಯಲ್ಲಿ ಸಿಬ್ಬಂದಿಯಾಗಿದ್ದ ಸತ್ಯೇನ್ ಚಟರ್ಜಿ ಎಂಬ ಈ ವ್ಯಕ್ತಿ  ನಿವೃತ್ತರಾಗಿದ್ದು ತದನಂತರ ಕಳೆದ 20 ವರ್ಷಗಳಿಂದಲೂ ಬಂಡವಾಳ ಹೂಡಿಕೆದಾರರ ಸಲಹಾ ಸಂಸ್ಥೆಯೊಂದನ್ನು ನಡೆಸುತ್ತಿದ್ದರು. ಆದರೆ 2013ರಲ್ಲಿ ವಾಷಿಂಗ್ಟನ್ ಹಣಕಾಸು ಇಲಾಖೆ, ಹೊಸ ಕಾನೂನು ತಂದು ಅನಧಿಕೃತ ಸಂಸ್ಥೆಗಳನ್ನು ಮುಚ್ಚಿಸಿ ಇಂತಹ ಸಂಸ್ಥೆಗಳ ಮೇಲೆ ಕೇಸು ಹಾಕಿತ್ತು.

ಇದೀಗ ಇಲ್ಲಿನ ನ್ಯಾಯಾಲಯದಲ್ಲಿ ಚಟರ್ಜಿಯ ಆರೋಪ ಅಪರಾಧ ಸಾಬೀತಾಗಿದ್ದು  20 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Write A Comment