ಅಂತರಾಷ್ಟ್ರೀಯ

ಅಶ್ಲೀಲ ಡೇಟಿಂಗ್ ವೆಬ್ ಸೈಟ್ ಬಂದ್ ಮಾಡಿಸಿದ ಚೀನಾ

Pinterest LinkedIn Tumblr

8844online-dating-websites1ಅಶ್ಲೀಲ ಮ್ಯಾಚ್ ಮೇಕಿಂಗ್ ವೆಬ್ ಸೈಟ್ ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಚೀನಾ ಮುಂದಾಗಿದ್ದು ನೂರಕ್ಕೂ ಹೆಚ್ಚು ಡೇಟಿಂಗ್ ವೆಬ್ ಸೈಟ್ ಗಳನ್ನೂ ಮುಚ್ಚುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ.

ಚೀನಾದ ಮ್ಯಾಚ್ ಮೇಕಿಂಗ್ ಜಾಲತಾಣಗಳಲ್ಲಿನ ವಂಚನೆ ಮತ್ತು ಅಶ್ಲೀಲತೆಯನ್ನು ತಡೆಗಟ್ಟಲು ಫೆಬ್ರವರಿಯಿಂದ ಅಭಿಯಾನ ಶುರುವಾಗಿತ್ತು. ಅಲ್ಲದೇ ವೆಬ್ ಸೈಟ್ ಗೆ ನೋಂದಣಿ ಮಾಡಿಕೊಳ್ಳುವವರ ದಾಖಲೆಗಳ ಕೊರತೆ, ಬಳಕೆದಾರರ ಮಾಹಿತಿ ಸೋರಿಕೆ ಮತ್ತು ಅಸಭ್ಯ, ಅಶ್ಲೀಲ ದೃಶ್ಯಗಳನ್ನು ಪ್ರಸಾರ ಮಾಡುತ್ತಿದ್ದ 100 ಡೇಟಿಂಗ್ ವೆಬ್ ಸೈಟ್ ಗಳನ್ನು ಅಕ್ರಮವೆಂದು  ಗುರುತಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ 100 ಅಕ್ರಮ ಡೇಟಿಂಗ್ ವೆಬ್ ಸೈಟ್ ಗಳನ್ನು ಮುಚ್ಚಿಸಲಾಗಿದ್ದು  20 ವೆಬ್ ಸೈಟ್ ಗಳಿಗೆ ತಮ್ಮ ಕಾರ್ಯವಿಧಾನದ ವಿಧಾನಗಳನ್ನು ಬದಲಾವಣೆ ಮಾಡಿಕೊಳ್ಳುವಂತೆ ಖಡಕ್ ಸೂಚನೆ ನೀಡಲಾಗಿದೆ.

ಆತಂಕಕಾರಿ ವಿಷವೆಂದರೆ ಕೆಲ ವೆಬ್ ಸೈಟ್ ಗಳು ಉದ್ದೇಶಪೂರ್ವಕವಾಗಿಯೇ ತನ್ನ ಬಳಕೆದಾರರಿಗೆ ಅಶ್ಲೀಲ ದೃಶ್ಯ ಕಾದಂಬರಿಗಳನ್ನು ಪ್ರಕಟ ಮಾಡಲು ಅವಕಾಶ ನೀಡಿತ್ತು. ಅಷ್ಟೇ ಅಲ್ಲ, ತನ್ನ ಬಳಕೆದಾರರು ನಕಲಿ ಹೆಸರಿನಲ್ಲಿಯೂ ನೋಂದಣಿ ಮಾಡುವುದಕ್ಕೆ ಅವಕಾಶ ಕಲ್ಪಿಸಿತ್ತು . ಈ ಹಿನ್ನೆಲೆಯಲ್ಲಿ ಚೀನಾ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು ಚೀನಾ ಸೈಬರ್ ಸ್ಪೇಸ್ ನಡೆಸುತ್ತಿರುವ ಅಭಿಯಾನಕ್ಕೆ ಅಲ್ಲಿನ ಹಲವು ಮ್ಯಾಚ್-ಮೇಕಿಂಗ್ ವೆಬ್ ಸೈಟ್ ಗಳು ಬೆಂಬಲವನ್ನೂ  ವ್ಯಕ್ತಪಡಿಸಿವೆ.

Write A Comment