ಅಂತರಾಷ್ಟ್ರೀಯ

1 ವರ್ಷದ ಸಹೋದರಿಗೆ ಗುಂಡಿಕ್ಕಿದ 3 ವರ್ಷದ ಬಾಲಕ

Pinterest LinkedIn Tumblr

3386gun_small1

ಅಮೆರಿಕಾ: ಮೂರು ವರ್ಷದ ಬಾಲಕನೊಬ್ಬ ತನ್ನ ಒಂದು ವರ್ಷದ ಸಹೋದರಿ ಮೇಲೆ ಹ್ಯಾಂಡ್ ಗನ್ ನಿಂದ ಗುಂಡು ಹಾರಿಸಿದ್ದು, ತೀವ್ರವಾಗಿ ಗಾಯಗೊಂಡಿರುವ ಬಾಲಕಿಯನ್ನು ಈಗ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಮೆರಿಕಾದ ಫ್ಲೋರಿಡಾ ಕರಾವಳಿ ಪ್ರದೇಶದ ಪುಟ್ಟ ನಗರ ಸಾರಾಸೋಟಾದಲ್ಲಿ ಈ ಘಟನೆ ನಡೆದಿದ್ದು, ಕಾರಿನಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬಳು ದಾರಿಯಲ್ಲಿ ಪರಿಚಿತರು ಸಿಕ್ಕ ಕಾರಣ ಕಾರಿನಿಂದಿಳಿದು ಅವರೊಡನೆ ಮಾತನಾಡುತ್ತಿದ್ದ ವೇಳೆ ಕಾರಿನೊಳಗೆ ಕುಳಿತಿದ್ದ ಮೂರು ವರ್ಷದ ಬಾಲಕ ಡ್ಯಾಶ್ ಬೋರ್ಡಿನಲ್ಲಿದ್ದ ಗನ್ ತೆಗೆದುಕೊಂಡು ಸಹೋದರಿ ಮೇಲೆ ಗುಂಡು ಹಾರಿಸಿದ್ದಾನೆ.

ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಸ್ತ್ರ ಚಿಕಿತ್ಸೆ ನಡೆಸಿ ಗುಂಡು ತೆಗೆದಿರುವ ವೈದ್ಯರು ಬಾಲಕಿ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಕ್ಕಳಿಗೆ ಸುಲಭವಾಗಿ ಗನ್ ಸಿಗುವಂತೆ ಇರಿಸುವ ಮೂಲಕ ಬಾಲಕಿಯ ಪ್ರಾಣಕ್ಕೆ ಕುತ್ತು ತಂದಿದ್ದಕ್ಕಾಗಿ ಮಕ್ಕಳ ತಾಯಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

Write A Comment