ಅಂತರಾಷ್ಟ್ರೀಯ

ನೇಪಾಳದಲ್ಲಿ ಉದಯಿಸಿದ ‘ಭಾರತಿ’ !

Pinterest LinkedIn Tumblr

604kathmandu-an-army-official-with-the-baby-girl-kannadadunia

ಭೂಕಂಪದಿಂದಾಗಿ ತತ್ತರಿಸಿ ಹೋಗಿರುವ ನೇಪಾಳಕ್ಕೆ ಭಾರತದ ಮೇಲೆ ಈ ಘಟನೆಯ ನಂತರ ಅಭಿಮಾನ ಹೆಚ್ಚಿದ್ದು ಇದಕ್ಕೆ ಸಾಕ್ಷಿ ಎಂಬಂತೆ ಭೂಕಂಪನದ ಸಮಯದಲ್ಲಿ  ಜನಿಸಿದ ಮಗುವಿಗೆ ‘ಭಾರತಿ’ ಎಂದು ನಾಮಕರಣ ಮಾಡಲಾಗಿದೆ.

ನೇಪಾಳದ ಭೂಕಂಪ ಪೀಡಿತ ಪ್ರದೇಶದಲ್ಲಿರುವ ಭಾರತೀಯ ಸೇನಾ ಆಸ್ಪತ್ರೆಯಲ್ಲಿ ಭಕ್ತಾಪುರದ ದುವಾಕೋಟೆಯ ಭಾವನ ಪುದಸೈನಿ ಎಂಬಾಕೆಗೆ ಹೆಣ್ಣುಮಗುವೊಂದು ಜನಿಸಿದ್ದು, ಆಕೆಗೆ ಭಾರತಿ ಎಂದು ನಾಮಕರಣ ಮಾಡಿದ್ದಾಳೆ.

ಭಾವನ ಅವರಿಗೆ ಭಾರತದ ಕುರಿತು ಬಲುಪ್ರೀತಿ. ಅದನ್ನು ಅವರು ತಮಗೆ ಚಿಕಿತ್ಸೆ ನೀಡಿದ ಭಾರತದ ವೈದ್ಯರ ಬಳಿ ತಿಳಿಸಿದ್ದು ಅದರಲ್ಲಿಯೂ ತಮ್ಮ ದೇಶೀಯರನ್ನು ಆತಂಕದ ಕ್ಷಣದಲ್ಲಿ ದೇವರಂತೆ ಬಂದು ಕಾಪಾಡಿದ ಭಾರತೀಯರ ನೆನಪಿಗಾಗಿ ತನ್ನ ನವಜಾತ ಶಿಶುವಿಗೆ ಭಾರತಿ ಪುದಸೈನಿ ಎಂದು ನಾಮಕರಣವನ್ನೂ ನೆರವೇರಿಸಿದ್ದಾರೆ.

Write A Comment