ಕರ್ನಾಟಕ

ರಾಜ್ಯದಲ್ಲಿ ಧಾರಕಾರ ಮಳೆ: ಸಂಚಾರ ಅಸ್ತವ್ಯಸ್ತ

Pinterest LinkedIn Tumblr

rain

ಬೆಂಗಳೂರು: ರಾಜ್ಯದ ದಕ್ಷಿಣ ಭಾಗದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಉದ್ಯಾನನಗರಿಯಲ್ಲಿ ವಾಹನ ಸವಾವರು ಮಳೆಗೆ ಸಿಲುಕಿರುವ ಪರಿಣಾಮ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿದೆ.

ನಗರದಲ್ಲಿ ಸರ್ಕಾರವು ಈ ಹಿಂದೆ ಕೈಗೊಂಡಿದ್ದ ಕೆರೆ ಒತ್ತುವರಿ ತೆರವು ವಿಚಾರಕ್ಕೆ ಸಂಬಂಧಿಸಿದಂತೆ  ಜೆಡಿಎಸ್ ಪಕ್ಷದ ವತಿಯಿಂದ ನಾಳೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಾಳೆಯ ಕಾರ್ಯಕ್ರಮಕ್ಕೆಂದು ಇಂದೇ ಪೆಂಡಾಲ್ ಹಾಕಲಾಗಿತ್ತು. ಆದರೆ ಧಾರಾಕಾರ ಮಳೆಗೆ ಸಿಲುಕಿದ ಪೆಂಡಾಲ್ ಸಂಪೂರ್ಣವಾಗಿ ಕುಸಿದಿದೆ. ಆದರೆ ಕಾರ್ಯಕ್ರಮ ನಾಳೆ ಇದ್ದ ಹಿನ್ನೆಲೆಯಲ್ಲಿ ಅಲ್ಲಿ ಯಾರೋಬ್ಬರೂ ಇರಲಿಲ್ಲ ಇದರಿಂದ ಅನಾಹುತ ತಪ್ಪಿದೆ.

ಇನ್ನು ಈ ಮಳೆಯ ಪರಿಣಾಮ ದಾವಣಗೆರೆಯಲ್ಲಿಯೂ ಬೀರಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿರುವ ಸರ್ವೋದಯ ಸಂವಾದ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಸಾರ್ವಜನಿಕರು ಭಾಗವಹಿಸಿದ್ದರು. ಆದರೆ ಮಳೆ ಬಂದ ಹಿನ್ನೆಲೆಯಲ್ಲಿ ಕೆಲವರು ಇತರೆ ಸಸುರಕ್ಷಿತ ಸ್ಥಳಗಳಿಗೆ ಓಡಿ ಹೋದರೆ, ಮತ್ತೆ ಕೆಲವರು ಕಾರ್ಯಕ್ರಮಕ್ಕೆ ಹಾಕಲಾಗಿದ್ದ ಕುರ್ಚಿಗಳನ್ನೇ ತಲೆ ಮೇಲೆ ಹೊತ್ತುಕೊಂಡು ಮಳೆಯನ್ನು ಎದುರಿಸಿದರು.

ಬೆಂಗಳೂರಿನಲ್ಲಿ ಧಾರಾಕಾರ ಮಳೆ, ಕುಸಿದು ಬಿದ್ದ ಜೆಡಿಎಸ್ ಪೆಂಡಾಲ್
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶನಿವಾರ ಮಧ್ಯಾಹ್ನದಿಂದಲೇ ಧಾರಾಕಾರ ಮಳೆ ಸುರಿಯುತ್ತಿದ್ದು, ಮಳೆಯಿಂದಾಗ ಮೆಜೆಸ್ಟಿಕ್ ಸೇರಿದಂತೆ ಹಲವು ಕಡೆ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.

ಮೆಜೆಸ್ಟಿಕ್, ಗಾಂಧಿನಗರದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಸಂಚಾರ ದಟ್ಟಣೆ ಉಂಟಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ವಾಹನ ಸವಾರರು ಮನೆ ತಲುಪಲು ಪರದಾಡುತ್ತಿದ್ದಾರೆ.

ಶಾಂತಿನಗರ, ಶೇಷಾದ್ರಿಪುರ, ಬಾಪೂಜಿನಗರ, ಈಜಿಪುರ, ಮಾಗಡಿರಸ್ತೆ, ಇಂದಿರಾನಗರ, ಚಾಮರಾಜಪೇಟೆ, ರಾಜಾಜಿನಗರ, ಕೆ.ಆರ್,ವೃತ್ತ, ಬಸವೇಶ್ವರ ನಗರ, ಸೇರಿದಂತೆ ನಗರದ ಬಹುತೇಕ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ.

ರಸ್ತೆಗಳು ಹಳ್ಳಗಳಂತಾದರೆ, ತಗ್ಗು ಪ್ರದೇಶಗಳು ಕೆರೆಗಳಾಗಿದ್ದು, ರಸ್ತೆ ಯಾವುದು, ಹೊಂಡ ಯಾವುದು ಎಂದು ಗುರುತಿಸಲು ಸಾಧ್ಯವಾಗದೆ ವಾಹನ ಸವಾರರು ಪರದಾಡುತ್ತಿದ್ದಾರೆ.

ಕುಸಿದು ಬಿದ್ದ ಜೆಡಿಎಸ್ ಪೆಂಡಾಲ್:

ನಗರದ ಫ್ರೀಡಂ ಪಾರ್ಕ್ ನಲ್ಲಿ  ನಾಳೆ ನಡೆಯಬೇಕಿರುವ ಜೆಡಿಎಸ್ ಅಹವಾಲು ಸ್ವೀಕಾರ ಸಮಾರಂಭಕ್ಕಾಗಿ ಬೃಹತ್ ಪೆಂಡಾಲ್ ಹಾಕಲಾಗಿತ್ತು. ಧಾರಾಕಾರ ಸುರಿದ ಪರಿಣಾಮ ಪೆಂಡಾಲ್ ಕುಸಿದುಬಿದ್ದ ಘಟನೆ ನಡೆದಿದೆ.

Write A Comment