ಅಂತರಾಷ್ಟ್ರೀಯ

ಪ್ರಭಾವಶಾಲಿ ಕಾಂಗ್ರೆಸ್‌ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಹಿಂದೂ ಮಹಿಳೆ ತುಳಸಿ

Pinterest LinkedIn Tumblr

TULSI-GABBARD

ವಾಷಿಂಗ್ಟನ್‌: ಅಮೆರಿಕದ ಕಾಂಗ್ರೆಸ್‌ನ 25 ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಅಮೆರಿಕದ ಸಂಸದರಾಗಿರುವ ತುಳಸಿ ಗಬ್ಬರ್ಡ್‌ ಸ್ಥಾನ ಪಡೆದುಕೊಂಡಿದ್ದಾರೆ.

ತುಳಸಿ ಗಬ್ಬರ್ಡ್‌ ಅವರು ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕಾಂಗ್ರೆಸ್‌ನ ಏಕೈಕ ಹಿಂದೂ ಸದಸ್ಯರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಿಕ್ಯೂ-ರೋಲ್‌ ಕಾಲ್ಸ್‌ ನ ಹೊಸ ಪುಸ್ತಕದಲ್ಲಿ ಪ್ರಕಟಿಸಲಾಗಿರುವ “ಪ್ರಭಾವಶಾಲಿ ಮಹಿಳೆಯರು ಕಾಂಗ್ರೆಸ್‌ನ 25ಪ್ರಭಾವಶಾಲಿ ಮಹಿಳೆಯರು’ ಪಟ್ಟಿಯಲ್ಲಿ ತುಳಸಿ ಗಬ್ಬರ್ಡ್‌ನ ಹೆಸರು ಕಾಣಿಸಿಕೊಂಡಿದೆ.

ಸಂಸದೆಯಾಗಿರುವ ತುಳಸಿ ಗಬ್ಬರ್ಡ್‌ ಡೆಮೊಕ್ರಾಟ್ಸ್‌ ಮತ್ತು ರಿಪಬ್ಲಿಕನ್ಸ್‌ರೊಂದಿಗೆ ಸೌಹಾರ್ದ ಯುತವಾಗಿ ಕಾರ್ಯ ನಿರ್ವಹಿಸುವ ಜತೆಯಲ್ಲಿ ಸೇನೆ ಮತ್ತು ವಿದೇಶಾಂಗ ವ್ಯವಹಾರಗಳಿಗಾಗಿನ ಸಶಸ್ತ್ರ ಸೇವೆಗಳಿಗಾಗಿನ ಸದನ ಸಮಿತಿ ಮತ್ತು ವಿದೇಶಾಂಗ ವ್ಯವಹಾರಗಳಿಗಾಗಿನ ಸದನ ಸಮಿತಿಯ ಸದಸ್ಯರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪುಸ್ತಕದಲ್ಲಿ ಗಬ್ಬರ್ಡ್‌ ಅವರನ್ನು ಕೊಂಡಾಡಲಾಗಿದೆ. ತುಳಸಿ ಗಬ್ಬರ್ಡ್‌ ಅವರು ಕಾಂಗ್ರೆಸ್‌ನ್ನು ಡೆಮಾಕ್ರಾಟ್‌ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ.

Write A Comment