ಅಂತರಾಷ್ಟ್ರೀಯ

ಲೈಂಗಿಕ ತೃಪ್ತಿ, ಜಾಗತಿಕ ಸಮೀಕ್ಷೆಯ ಫಲಿತಾಂಶ ಪ್ರಕಟ

Pinterest LinkedIn Tumblr

sex

ಲಂಡನ್, ಮೇ. 2: ಪ್ರಪಂಚದಲ್ಲಿ ಏನೇನೋ ವಿಷಯಗಳನ್ನು ಮುಂದಿಟ್ಟುಕೊಂಡು ಸಮೀಕ್ಷೆ ನಡೆಸುತ್ತಾರೆ. ಕೆಲವು ಸಮೀಕ್ಷೆಗಳು ಸ್ವಾರಸ್ಯಕರ ಅಂಕಿ ಅಂಶಗಳನ್ನು ಹೊರಹಾಕಿದರೆ, ಇನ್ನು ಕೆಲವು ಬೋರು ಹೊಡೆಸುತ್ತವೆ. ಈ ಸರ್ವೇಗಳನ್ನು ನಂಬಬಹುದಾ? ಅಂತ ಅನಿಸುತ್ತೆ. ಇತ್ತೀಚೆಗೆ ನಡೆಸಲಾದ ಇನ್ನೊಂದು ಸಮೀಕ್ಷೆಯ ಬಗ್ಗೆ ಈಗ ಕಣ್ಣು ಹಾಯಿಸೋಣ.

ಪ್ರಪಂಚದಲ್ಲಿ ಲೈಂಗಿಕವಾಗಿ ಹೆಚ್ಚಿನ ತೃಪ್ತಿ ಹೊಂದಿರುವ ರಾಷ್ಟ್ರಗಳು ಯಾವುವು? ಎನ್ನುವುದು ಸಮೀಕ್ಷೆಯ ಕಥಾವಸ್ತು. ಈ ವಿಷ್ಯದಲ್ಲಿ ಭಾರತಕ್ಕೆ 8ನೇ ಸ್ಥಾನ ದಕ್ಕಿದೆ. ಅಂದರೆ, ಅಂಥ ಕಳಪೆ ಪ್ರದರ್ಶನವೇನಲ್ಲ, ಬಿಡಿ. ಸ್ವಿಡ್ಜರ್ ಲೆಂಡ್ ಪ್ರಥಮ ಸ್ಥಾನ ಅಲಂಕರಿಸಿದೆ. ಡುರೆಕ್ಸ್ ಸಂಸ್ಥೆ ನಡೆಸಿದ ಈ ಸಮೀಕ್ಷೆಯಲ್ಲಿ 16 ವರ್ಷಕ್ಕೆ ಮೇಲ್ಪಟ್ಟ 26 ಸಾವಿರ ಜನ ಪಾಲ್ಗೊಂಡಿದ್ದರು.

ಸಮೀಕ್ಷೆ ಮತ್ತೊಂದು ಅಂಶವನ್ನು ಬಹಿರಂಗ ಮಾಡಿದ್ದು 26 ರಾಷ್ಟ್ರಗಳಲ್ಲಿ ಕೇವಲ ಶೇ. 44 ರಷ್ಟು ಜನ ಮಾತ್ರ ಲೈಂಗಿಕ ತೃಪ್ತಿ ಪಡೆಯುತ್ತಿದ್ದಾರೆ ಎಂದು ‘ಇಂಡಿಪೆಂಡೆಂಟ್’ ಪತ್ರಿಕೆಯ ವರದಿ ಹೆಳುತ್ತದೆ. ಸ್ಪೇನ್ ಮತ್ತು ಇಟಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡಿವೆ.

ಗ್ರೀಸ್ ಮತ್ತು ಬ್ರೇಜಿಲ್ ಅಗ್ರ 5 ರೊಳಗೆ ಸ್ಥಾನ ಗಿಟ್ಟಿಸಿವೆ. ವಿಶ್ವದಲ್ಲೇ ರೋಮ್ಯಾಂಟಿಕ್ ದೇಶ ಎಂದು ಹೆಸರು ಗಳಿಸಿರುವ ಫ್ರಾನ್ಸ್ ಅಗ್ರ ಹತ್ತರೊಳಗಿಲ್ಲ. ಜತೆಗೆ ಯುಕೆ ಮತ್ತು ಯುಎಸ್ ಗಳು 10 ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿವೆ. ಅಂತಿಮವಾಗಿ ವಯಸ್ಸು, ಉತ್ತಮ ಆರೋಗ್ಯ ಮತ್ತು ದೈಹಿಕ ಸಾಮರ್ಥ್ಯ ಲೈಂಗಿಕ ತೃಪ್ತಿಯ ಮೇಲೆ ಪರಿಣಾಮ ಬೀರ್ತದೆ ಎಂದು ಡುರೆಕ್ಸ್ ಭಾವಿಸಿದೆ.
-ದಟ್ಸ್ ಕನ್ನಡ

Write A Comment