ಅಂತರಾಷ್ಟ್ರೀಯ

ದುಬೈನಲ್ಲಿದ್ದಾರೆ 8 ಲಕ್ಷ ಮಂದಿ ಭಾರತೀಯರು.. !

Pinterest LinkedIn Tumblr

Indian-In-Dubhiದುಬೈ, ಏ.25- ಭಾರತದ ಸುಮಾರು 8 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಪ್ರಜೆಗಳು ದುಬೈಯಲ್ಲಿ ಅಧಿಕೃತವಾಗಿ ವಾಸ್ತವ್ಯವಿದ್ದಾರೆ. ಉಳಿದಂತೆ 25 ಸಾವಿರಕ್ಕೂ ಹೆಚ್ಚು ಭಾರತೀಯರು ದೇಶದಲ್ಲಿ ಅನಧಿಕೃತವಾಗಿ ನೆಲೆಸಿದ್ದಾರೆ ಎಂದು ಕುವೈತ್ ರಾಯಭಾರ ಕಚೇರಿ ವರದಿ ತಿಳಿಸಿದೆ. ಕುವೈತ್ ಆಡಳಿತ ನಡೆಸಿರುವ ಸಮೀಕ್ಷಾ ವರದಿಯನ್ನು ಉಲ್ಲೇಖಿಸಿ ಈ ಅಂಕಿ-ಅಂಶ ನೀಡಿರುವ ರಾಯಭಾರ ಕಚೇರಿ, ದೇಶದಲ್ಲಿಯ ಅತ್ಯಂತ ಅಧಿಕ ವಿದೇಶೀಯರು ಭಾರತೀಯರು ಎಂದು ಕಚೇರಿ ಮೂಲಗಳು ತಿಳಿಸಿವೆ.

ವಿಶೇಷವೆಂದರೆ ಕುವೈತ್‌ನಲ್ಲಿರುವ ಭಾರತೀಯರ ಸಂಖ್ಯೆ ಪ್ರತಿ ವರ್ಷವೂ ಶೇ.5.6ರಷ್ಟು ಸಂಖ್ಯೆಯಲ್ಲಿ ಬೆಳೆಯುತ್ತಿದೆ. ಇನ್ನು ಎರಡನೆಯ ಅತಿ ಹೆಚ್ಚು ವಿದೇಶಿಯರೆಂದರೆ ಈಜಿಪ್ಟ್‌ನವರು. ಕುವೈತ್‌ನಲ್ಲಿರುವ ಭಾರತೀಯರಲ್ಲಿ ಲಿಂಗಾನುಪಾತ ಭಾರೀ ಏರು ಪೇರಾಗಿದೆ. ಒಟ್ಟು 8 ಲಕ್ಷದಲ್ಲಿ 6 ಲಕ್ಷದಷ್ಟು ಪುರುಷರಿದ್ದರೆ, ಕೇವಲ 2 ಲಕ್ಷ ಮಹಿಳೆಯರಿದ್ದಾರೆ. ಇದರಲ್ಲಿ 90 ಸಾವಿರ ಮಹಿಳೆಯರೂ ಸೇರಿದಂತೆ ಒಟ್ಟು 2.8 ಲಕ್ಷ ಭಾರತೀಯರು ವಿವಿಧ ಬಗೆಯ ಮನೆಗೆಲಸಗಳಲ್ಲಿ ತೊಡಗಿದ್ದಾರೆ. (ಚಾಲಕರು, ತೋಟ ವೀಕ್ಷಕರು, ಅಡಿಗೆ ಇತ್ಯಾದಿ).

Write A Comment