ಅಂತರಾಷ್ಟ್ರೀಯ

ಹುಡುಗಿಯರು ಓಡಿದರೆ ಕನ್ಯತ್ವ ಕಳೆದುಕೊಳ್ತಾರೆಂದ ಪ್ರಿನ್ಸಿಪಾಲ್

Pinterest LinkedIn Tumblr

girl

ಆಸ್ಟ್ರೇಲಿಯಾ: ಹುಡುಗಿಯರು ಕ್ರೀಡಾ ಸ್ಪರ್ಧೆಗಳಲ್ಲಿ ಅದರಲ್ಲೂ ಓಡುವ ಸ್ಪರ್ಧೆಗಳಲ್ಲಿ ಪಾಲ್ಗೊಂಡರೆ ಕನ್ಯತ್ವ ಕಳೆದುಕೊಳ್ಳುತ್ತಾರೆಂಬ ಕಾರಣಕ್ಕೆ ಶಾಲಾ ಪ್ರಾಂಶುಪಾಲನೊಬ್ಬ ಓಟದ ಸ್ಪರ್ಧೆಗಳಲ್ಲಿ ಹುಡುಗಿಯರು ಭಾಗವಹಿಸುವುದನ್ನು ನಿಷೇಧಿಸಿರುವ ಅಂಶ ಬಯಲಾಗಿದೆ.

ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿರುವ ಇಸ್ಲಾಮಿಕ್ ಶಾಲೆಯ ಪ್ರಾಂಶುಪಾಲ ಓಮರ್ ಎಂಬಾತ ತನ್ನ ಶಾಲೆಯ ಹುಡುಗಿಯರಿಗೆ ಈ ರೀತಿಯ ನಿರ್ಬಂಧ ಹೇರಿದ್ದು, ಇದೇ ಶಾಲೆಯ ಮಾಜಿ ಅಧ್ಯಾಪಕರೊಬ್ಬರು ಈ ಕುರಿತು ಈಗ ಆಸ್ಟ್ರೇಲಿಯಾ ಸರ್ಕಾರಕ್ಕೆ ದೂರು ನೀಡಿದ್ದಾರೆ.

ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡರೆ ಕೇವಲ ಕನ್ಯತ್ವ ಕಳೆದುಕೊಳ್ಳುವುದಷ್ಟೇ ಅಲ್ಲ. ಅವರು ಮುಂದೆ ಗರ್ಭಿಣಿಯರಾಗುವುದು ಕಷ್ಟ ಎಂಬ ನಂಬಿಕೆಯನ್ನು ಈ ಪ್ರಾಂಶುಪಾಲ ಹೊಂದಿದ್ದನೆಂದು ಹೇಳಲಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಆಸ್ಟ್ರೇಲಿಯಾ ಸರ್ಕಾರ ಈಗ ತನಿಖೆಗೆ ಆದೇಶಿಸಿದೆ.

Write A Comment